ಮಂಗಳೂರು: ಕಂಟೈನರ್ ಲಾರಿಯೊಂದು ಟರ್ನ್ ಮಾಡಲು ಹೋಗಿ ರೈಲ್ವೆ ಹಳಿಯ ಮೇಲೆಯೇ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ. ರಾತ್ರಿ 8.30 ಸುಮಾರಿಗೆ ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ ಬಳಿ ಈ ಘಟನೆ ನಡೆದಿದೆ.
ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಜುಮ್ಮಾ ಮಸೀದಿ ಬಳಿಯ ಡೆಲಿವರಿ ಪಾರ್ಸೆಲ್ ಸಂಸ್ಥೆಗೆ ಸರಕುಗಳನ್ನು ಹೊತ್ತು ಕಂಟೈನರ್ ಲಾರಿ ಬಂದಿತ್ತು. ಲಾರಿಯಲ್ಲಿದ್ದ ಪಾರ್ಸೆಲ್ಗಳನ್ನು ಖಾಲಿ ಮಾಡಲು ಕಂಟೈನರ್ ಲಾರಿಯನ್ನು ಚಾಲಕ ಟರ್ನ್ ಮಾಡುತ್ತಿದ್ದ ವೇಳೆ ಲಾರಿ ಆಯತಪ್ಪಿ ರೈಲ್ವೆ ಹಳಿಯ ಮೇಲೆಯೇ ಬಿದ್ದುಬಿಟ್ಟಿದೆ.
ಗೂಡ್ಸ್ ರೈಲು ಬರುವ ಮೊದಲು ರೈಲು ಹಳಿಯ ಮೇಲೆಯೇ ಕಂಟೈನರ್ ಲಾರಿ ಬಿದ್ದಿದ್ದು, ಈಗಾಗಲೇ ಈ ಹಳಿಯ ಮೂಲಕ ಬರುವ ಗೂಡ್ಸ್ ರೈಲುಗಳನ್ನು ನಿಲುಗಡೆ ಮಾಡಲಾಗಿದೆ. ಲಾರಿಯನ್ನು ಕ್ರೇನ್ ಮೂಲಕ ಮೇಲತ್ತುವ ಪ್ರಯತ್ನವನ್ನು ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಇಬ್ಬರು ಯುವಕರ ಡಬಲ್ ಮರ್ಡರ್