ಮಂಗಳೂರು: ಬಹರೈನ್ನಿಂದ ಮಂಗಳೂರಿಗೆ 60 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಹೊತ್ತು ತರುತ್ತಿರುವ ನೌಕೆ ಇಂದು ಮಧ್ಯಾಹ್ನ ನವಮಂಗಳೂರು ಬಂದರು ತಲುಪಲಿದೆ.
ಭಾರತೀಯ ತಟ ರಕ್ಷಣಾ ಪಡೆಯ ಐಎನ್ಎಸ್ ತಲ್ವಾರ್ ಹಡಗು ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಗಳನ್ನು ಬಹರೈನ್ನ ಮನಮಾ ಬಂದರ್ನಿಂದ ತರುತ್ತಿದೆ. ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳು ಸಹ ಈ ಹಡಗಿನಲ್ಲಿವೆ.
ರಾಜ್ಯದಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಈ ಆಕ್ಸಿಜನ್ ಪೂರೈಕೆ ಮಾಡಲು ಉದ್ದೇಶಿಸಲಾಗಿದೆ.
ಓದಿ: ಜೀವನ್ಮರಣದ ವೇಳೆ ಸಿಗದ ಪ್ರಾಣವಾಯು: ತಮಿಳುನಾಡಿನಲ್ಲಿ 11 ಸೋಂಕಿತರ ದಾರುಣ ಸಾವು