ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ 6 ಚಿನ್ನದ ಬಿಸ್ಕತ್​​ ವಶ

author img

By

Published : Sep 28, 2020, 7:45 AM IST

ದುಬೈನಿಂದ ಬಂದಿಳಿದ ವಿಮಾನದಿಂದ 6 ಚಿನ್ನದ ಬಿಸ್ಕತ್​​ ವಶಪಡಿಸಿಕೊಳ್ಳಲಾಗಿದೆ. 671 ಗ್ರಾಂ ತೂಕದ ಈ ಚಿನ್ನದ ಬಿಸ್ಕತ್​ಗಳ ಮೌಲ್ಯ 33.88 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

6 gold biscuits seized At Mangalore Airport
6 ಚಿನ್ನದ ಬಿಸ್ಕತ್ ಗಳು ವಶ

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಕಸ್ಟಮ್ಸ್​​​​ ಗುಪ್ತಚರ ಘಟಕದ ಅಧಿಕಾರಿಗಳು ದುಬೈನಿಂದ ಬಂದಿಳಿದ ವಿಮಾನದಿಂದ 6 ಚಿನ್ನದ ಬಿಸ್ಕತ್​ ವಶಪಡಿಸಿಕೊಂಡಿದ್ದಾರೆ. 671 ಗ್ರಾಂ ತೂಕದ ಈ ಚಿನ್ನದ ಬಿಸ್ಕತ್​ಗಳ ಮೌಲ್ಯ 33.88 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ವಿಮಾನವು ದುಬೈ-ಮಂಗಳೂರು-ಹೈದರಾಬಾದ್ ನಡುವೆ ಸಂಚಾರ ನಡೆಸುತ್ತಿದ್ದು, ದುಬೈನಿಂದ ಮಂಗಳೂರು ತನಕ ಅಂತಾರಾಷ್ಟ್ರೀಯ ಯಾನವಾಗಿ ಹಾಗೂ ಮಂಗಳೂರು- ಹೈದರಾಬಾದ್ ನಡುವೆ ದೇಶೀಯ ಯಾನವಾಗಿ ಕಾರ್ಯಾಚರಿಸುತ್ತಿದೆ.

ಮಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ಪ್ರಯಾಣಿಕ ಈ ಚಿನ್ನವನ್ನು ಸಂಗ್ರಹಿಸಿ ಕೊಂಡೊಯ್ಯುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ಆತ ಚಿನ್ನದ ಬಿಸ್ಕತ್​ಗಳನ್ನು ವಿಮಾನದ ಸೀಟಿನಡಿಯಲ್ಲಿ ಅಡಗಿಸಿ ಕೊಂಡೊಯ್ಯಲು ಯತ್ನಿಸಿದ್ದ.

ದೇಶೀಯ ಯಾನ ಆಗಿರುವುದರಿಂದ ವಿಮಾನದಲ್ಲಿ ಕಟ್ಟುನಿಟ್ಟಿನ ತಪಾಸಣೆ ಇರಲಾರದು ಎಂದು ಭಾವಿಸಿ ಈ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಲಾಗಿತ್ತು ಎಂದು ಕಸ್ಟಮ್ಸ್​​​​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.