ETV Bharat / state

500 ದಿನಸಿ ಕಿಟ್ ವಿತರಿಸಿದ ಸಂತ ಆಗ್ನೇಸ್ ಸಮುದಾಯದತ್ತ ಕಾಲೇಜು - ಸಂತ ಆಗ್ನೇಸ್ ಸಮುದಾಯದತ್ತ ಕಾಲೇಜು

ಸಂತ ಆಗ್ನೇಸ್ ಸಮುದಾಯದತ್ತ ಕಾಲೇಜು ವತಿಯಿಂದ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುನ್ನೂರು, ಅಂಬ್ಲಮೊಗರು, ಹರೇಕಳ ಗ್ರಾಮದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೀಡಲಾದ ಆಹಾರ ಪದಾರ್ಥಗಳ ಕಿಟ್​ಗಳನ್ನು ಕುತ್ತಾರು ದುರ್ಗಾ ವಾಹಿನಿ ಮಹಿಳಾ ಮಂಡಲ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ವಿತರಿಸಿದರು.

500 Food Kit delivered by Agnes College
ಆಹಾರ ಪದಾರ್ಥಗಳ ಕಿಟ್ ವಿತರಣೆ
author img

By

Published : Apr 30, 2020, 3:56 PM IST

ಉಳ್ಳಾಲ: ಪಾಳುಬಿದ್ದ ಗದ್ದೆಗಳಲ್ಲಿ ಕೃಷಿ ಕಾರ್ಯ ನಡೆಸುವ ಮುಖೇನ ಗ್ರಾಮಸ್ಥರ ನೆರವಿಗೆ ನಿಂತ ಆಗ್ನೇಸ್ ತಂಡ ಇದೀಗ ಕೋವಿಡ್-19 ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂದಿಸಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಹೇಳಿದರು.

ಸಂತ ಆಗ್ನೇಸ್ ಸಮುದಾಯದತ್ತ ಕಾಲೇಜು ವತಿಯಿಂದ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುನ್ನೂರು, ಅಂಬ್ಲಮೊಗರು, ಹರೇಕಳ ಗ್ರಾಮದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೀಡಲಾದ 500 ಆಹಾರ ಪದಾರ್ಥಗಳ ಕಿಟ್​ಗಳನ್ನು ಕುತ್ತಾರು ದುರ್ಗಾ ವಾಹಿನಿ ಮಹಿಳಾ ಮಂಡಲ ಕಟ್ಟಡದಲ್ಲಿ ವಿತರಿಸಿ ಮಾತನಾಡಿದ ಅವರು, ಕೋವಿಡ್-19 ಕಾರ್ಯಾಚರಣೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದರು.

ಇನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಸಿಸ್ಟರ್ ರೂಪಾ ಮಾತನಾಡಿ, ಕೊರೊನಾ ಸೋಂಕಿತರ ಸಂಖ್ಯೆಗಳನ್ನು ನೋಡಿದಾಗ ಭಯ ಹೆಚ್ಚಾಗುತ್ತಿವೆ. ಸಾವು ಬೇಸರ ಕೊಟ್ಟಿದೆ. ಜೊತೆಗೆ ಹಲವರನ್ನು ನಿರಾಶ್ರಿತರನ್ನಾಗಿಯೂ ಮಾಡಿದೆ. ಈ ನಿಟ್ಟಿನಲ್ಲಿ ಜಾತಿ ಧರ್ಮ ನೋಡದೆ ಮಾನವೀಯತೆ ತೋರಿಸಲು ಕೊಟ್ಟ ಅವಕಾಶ ಇದು ಎಂದರು.

ಇದೇ ಸಂದರ್ಭ ಮೂರು ಗ್ರಾಮಗಳಿಗೆ ನೀಡಲಾದ 500 ಆಹಾರ ಪದಾರ್ಥಗಳ ಕಿಟ್​​ಗಳನ್ನು ಜಿಲ್ಲಾ ಆರೋಗ್ಯ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.