ETV Bharat / state

ಬೆಂದೂರು ಚರ್ಚ್‌ ಕಛೇರಿಗೆ ನುಗ್ಗಿದ ಕಳ್ಳ: 4 ಲಕ್ಷ ರೂ. ನಗದು ದೋಚಿ ಪರಾರಿ

ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್​ನ ಫಾದರ್ ಬೆಳಿಗ್ಗೆ 6.30ಕ್ಕೆ ಸಾಮೂಹಿಕ ಪ್ರಾರ್ಥನೆಗೆ ತೆರಳಿದ್ದರು‌. ಬೆಳಗ್ಗಿನ ಅವಸರದಲ್ಲಿ ಹೊರಟ ಅವರು ಕಚೇರಿಯ ಬಾಗಿಲಿಗೆ ಬೀಗ ಹಾಕಲು ಮರೆತಿದ್ದರು‌. ಈ ವೇಳೆ ಕಚೇರಿಗೆ ನುಗ್ಗಿದ ಕಳ್ಳ  4.98 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ.

Baindur Church
ಬೆಂದೂರು ಚರ್ಚ್
author img

By

Published : Apr 6, 2021, 12:32 PM IST

ಮಂಗಳೂರು: ಬೆಂದೂರಿನ ಚರ್ಚ್ ಕಛೇರಿಗೆ ನುಗ್ಗಿದ ಕಳ್ಳನೋರ್ವ ಲಕ್ಷಾಂತರ ರೂ. ಹಣ ದೋಚಿ ಪರಾರಿಯಾಗಿದ್ದಾನೆ.

ಏಪ್ರಿಲ್‌ 5 ರಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್​ನ ಫಾದರ್ ಬೆಳಿಗ್ಗೆ 6.30ಕ್ಕೆ ಸಾಮೂಹಿಕ ಪ್ರಾರ್ಥನೆಗೆ ತೆರಳಿದ್ದರು‌. ಬೆಳಗ್ಗಿನ ಅವಸರದಲ್ಲಿ ಹೊರಟ ಅವರು ಕಚೇರಿಯ ಬಾಗಿಲಿಗೆ ಬೀಗ ಹಾಕಲು ಮರೆತಿದ್ದರು‌. ಈ ವೇಳೆ ಕಚೇರಿಗೆ ನುಗ್ಗಿದ ಕಳ್ಳ 4.98 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾನೆ.

ಫಾದರ್ ಅವರು ಪ್ರಾರ್ಥನೆ ಮುಗಿಸಿ ಮತ್ತೆ ಕಚೇರಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.