ETV Bharat / state

ಮಂಗಳೂರು ವಿವಿ ಘಟಿಕೋತ್ಸವ: ತುಳು ಪ್ರಥಮ ಬ್ಯಾಚ್​​ನಲ್ಲಿ ಬ್ಯಾಂಕ್​ ನೌಕರನಿಗೆ ಅಗ್ರ ಶ್ರೇಯಾಂಕ

ಮಂಗಳೂರು ವಿವಿಯಲ್ಲಿ 39ನೇ ಘಟಿಕೋತ್ಸವ ಸರಳವಾಗಿ ನೆರವೇರಿದೆ. ಕೋವಿಡ್ ಹಿನ್ನೆಲೆ ಕೆಲವೇ ಮಂದಿಗಷ್ಟೇ ಸಮಾರಂಭಕ್ಕೆ ಅವಕಾಶ ನೀಡಲಾಗಿತ್ತು. ಅದರಂತೆ ಕೋವಿಡ್ ನಿಯಾಮಾವಳಿ ಅನುಸಾರ ಕಾರ್ಯಕ್ರಮ ಜರುಗಿದೆ.

39th-convocation-of-mangalore-university
ಮಂಗಳೂರು ವಿವಿಯ 39ನೇ ಘಟಿಕೋತ್ಸವ
author img

By

Published : Apr 11, 2021, 12:40 AM IST

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 39ನೇ ಘಟಿಕೋತ್ಸವವು ವಿಶ್ವವಿದ್ಯಾನಿಲಯದ ಆವರಣದ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಕೋವಿಡ್ ನಿಯಮಾವಳಿಯಂತೆ ನಡೆದ ಕಾರ್ಯಕ್ರಮದಲ್ಲಿ 117 ಪಿಎಚ್​​ಡಿ, 10 ಚಿನ್ನದ ಪದಕ ವಿಜೇತ ಮತ್ತು 69 ಪ್ರಥಮ ಶ್ರೇಣಿ ಪಡೆದವರಿಗೆ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿ ಉಪಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಅವರು ಪದವಿ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ ಸುಧಾಮೂರ್ತಿ, ಶೈಕ್ಷಣಿಕ ಜೀವನದಿಂದ ಹೊರಜಗತ್ತಿಗೆ ಪಾದಾರ್ಪಣೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು, ಶಿಕ್ಷಕರು ಇರುವುದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಜ್ಞಾನವನ್ನು ಬಳಸಿ ಮುನ್ನುಗ್ಗಬೇಕು. ಯಶಸ್ಸಿಗೆ ಅಡ್ಡ ದಾರಿ ಬಳಸದೆ ಕಠಿಣ ಪರಿಶ್ರಮ ಪಡಬೇಕು. ಸವಾಲುಗಳನ್ನು ಎದುರಿಸಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಗಳೂರು ವಿವಿಯ 39ನೇ ಘಟಿಕೋತ್ಸವ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 2019-20ನೇ ಸಾಲಿನಲ್ಲಿ 33,806 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ 117 ಪಿಹೆಚ್​​ಡಿ, 6,657 ಸ್ನಾತಕೋತ್ತರ ಪದವಿ, 36,940 ಪದವಿ, 29 ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿಗಳಿದ್ದಾರೆ. 117 ಪಿಹೆಚ್​​ಡಿ, 10 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಮತ್ತು ಪ್ರಥಮ ರ್ಯಾಂಕ್​ ಪಡೆದ 69 ವಿದ್ಯಾರ್ಥಿಗಳಿಗೆ ಮಾತ್ರ ನಿನ್ನೆ ನಡೆದ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

ತುಳುವಿನ ಮೊದಲ ಬ್ಯಾಚ್​​ನಲ್ಲಿ ರ್ಯಾಂಕ್​ ಪಡೆದ ಬ್ಯಾಂಕ್ ಉದ್ಯೋಗಿ!

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 2018-19ರಲ್ಲಿ ತುಳು ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸಲಾಗಿತ್ತು. ಇದರ ಮೊದಲ ಬ್ಯಾಚ್ ಮುಗಿದಿದ್ದು ಮೊದಲ ಬ್ಯಾಚ್​ನ ವಿದ್ಯಾರ್ಥಿ ಭರತೇಶ್ ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ. ಬ್ಯಾಂಕ್ ಅಫ್ ಬರೋಡದ ಉದ್ಯೋಗಿಯಾಗಿದ್ದ ಇವರು ಉದ್ಯೋಗದ ನಡುವೆ ತುಳುವಿನಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಿದ್ದರು.

ಬ್ಯಾಡ್ಮಿಂಟನ್ ಚಾಂಪಿಯನ್ ಪಿಜಿಡಿಬಿಎಂನಲ್ಲಿ ಪ್ರಥಮ

ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಜಯಲಕ್ಷ್ಮಿ ಅವರು ಪಿಜಿಡಿಬಿಎಂನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ‌. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗದ್ದು, 6 ಚಿನ್ನದ ಪದಕ ಪಡೆದಿದ್ದರು. ಕ್ರೀಡಾ ಕೋಟದಲ್ಲಿ ಮೂಡಬಿದ್ರೆ ಆಳ್ವಾಸ್​​​ನಲ್ಲಿ ಉಚಿತ ಶಿಕ್ಷಣ ಪಡೆದಿದ್ದರು. ಕ್ರೀಡೆಯಲ್ಲಿ ಸಾಧನೆ ಮಾಡುವ ಜೊತೆಗೆ ಇವರು ಕಲಿಕೆಯಲ್ಲಿಯೂ ಸಾಧನೆ ಮಾಡಿದ್ದಾರೆ.

ಅಮ್ಮನ ಸಾವಿನ ನೋವಿನಲ್ಲೂ ರ್ಯಾಂಕ್​​​​ ಪಡೆದ ಪಲ್ಲವಿಶೆಟ್ಟಿ!

ಇಂಡಸ್ಟ್ರೀಸ್ ಕೆಮಿಸ್ಟ್ರಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪಲ್ಲವಿ ಶೆಟ್ಟಿ ಮೊದಲ ಶ್ರೇಯಾಂಕ​​​ ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯ ಮೊದಲ ಸೆಮಿಸ್ಟರ್ ವೇಳೆ ತಾಯಿ ಮೃತಪಟ್ಟಿದ್ದರು. ಈ ನೋವಿನ ನಡುವೆಯೂ, ಎಲ್ಲರ ಪ್ರೋತ್ಸಾಹದ ನಡುವೆ ಇವರು ಉತ್ತಮ ಸಾಧನೆ ಮಾಡಿ ಮಾದರಿಯಾಗಿದ್ದಾರೆ.

5 ವಿವಿಧ ಕೋರ್ಸ್ ಬಳಿಕ ಪಿಹೆಚ್​​​​ಡಿ ಪಡೆದ ಲವೀನಾ

ಮೆಡಿಕಲ್ ಪ್ಲಾನೆಟ್ ವಿಷಯದಲ್ಲಿ ಲವೀನಾ ಎಂಬ ವಿದ್ಯಾರ್ಥಿನಿ ಪಿಹೆಚ್​​​​ಡಿ ಪಡೆದಿದ್ದಾರೆ. ಇವರು ಈ ಪಿಹೆಚ್​ಡಿ ಪದವಿ ಪಡೆಯುವುದಕ್ಕೆ ಮುಂಚೆ ವಿವಿಧ ವಿಷಯಗಳಲ್ಲಿ 5 ಕೋರ್ಸ್ ಗಳನ್ನು ಮುಗಿಸಿದ್ದರು. ಆ ಐದು ಕೋರ್ಸ್​ಗಳ ಪದವಿಯನ್ನು ವೇದಿಕೆಯಲ್ಲಿ ಪಡೆಯಲು ಸಾಧ್ಯವಾಗಿರಲಿಲ್ಲ. ಇಲ್ಲಿ ಇದು ಸಾಧ್ಯವಾಗಿದೆ ಎಂದು ಲವೀನಾ ಅಭಿಪ್ರಾಯಪಟ್ಟಿದ್ದಾರೆ.

ಎಂಎ ಇತಿಹಾಸದಲ್ಲಿ 2 ಚಿನ್ನದ ಪದಕ ಪಡೆದ ಸುಕನ್ಯಾ

ಮಂಗಳೂರು ವಿಶ್ವವಿದ್ಯಾನಿಲಯದ ಎಂಎ ಹಿಸ್ಟರಿ ವಿಭಾಗದಲ್ಲಿ ಸುಕನ್ಯಾ ಮೊದಲ ಶ್ರೇಯಾಂಕ ಪಡೆದಿದ್ದಾರೆ.

14 ವಿದೇಶಿ ವಿದ್ಯಾರ್ಥಿಗಳಲ್ಲಿ ಓರ್ವ ಮಾತ್ರ ಭಾಗಿ!

ಪಿಹೆಚ್​​​ಡಿ ಬರೆದ 117 ವಿದ್ಯಾರ್ಥಿಗಳ ಪೈಕಿ 14 ವಿದೇಶಿ ವಿದ್ಯಾರ್ಥಿಗಳು ಇದ್ದರು. 13 ಪುರುಷ ವಿದ್ಯಾರ್ಥಿ, 1 ಮಹಿಳಾ ವಿದ್ಯಾರ್ಥಿ ಪಿಹೆಚ್​​ಡಿ ಪದವಿ ಪಡೆಯಲು ಅರ್ಹರಾಗಿದ್ದರು. ಆದರೆ ಕೊರೊನಾ ಕಾರಣದಿಂದ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಭಾಗವಹಿಸಲು ಅಸಾಧ್ಯವಾಗಿಲ್ಲ. ಕೊರೊನಾ ನೆಗೆಟಿವ್ ರಿಪೋರ್ಟ್ ಇಲ್ಲದ ಕಾರಣಕ್ಕಾಗಿ ಕೆಲ ವಿದೇಶಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಭಾಗಿಯಾಗಿರಲಿಲ್ಲ. 14 ಮಂದಿಯಲ್ಲಿ ಕೇವಲ ಓರ್ವ ಸಂಶೋದನಾರ್ಥಿ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.