ETV Bharat / state

ದಕ್ಷಿಣ ಕನ್ನಡದ 3 ಗ್ರಾಮಗಳು ಸೀಲ್​​ಡೌನ್ ಮುಕ್ತ...ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್​​​

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಾಲೋನಿ ಹಾಗೂ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮಗಳು ಏಪ್ರಿಲ್ 18 ರಿಂದ ಸೀಲ್​ಡೌನ್​​​ಗೆ ಒಳಗಾಗಿದ್ದವು. ಇದೀಗ ಈ ಮೂರೂ ಗ್ರಾಮಗಳು ಸೀಲ್​​ಡೌನ್​ ಮುಕ್ತವಾಗಿವೆ.

Dakshina kannada
ಸಿಂಧು ಬಿ. ರೂಪೇಶ್​​​
author img

By

Published : Apr 27, 2020, 11:22 PM IST

ಮಂಗಳೂರು (ದಕ್ಷಿಣ ಕನ್ನಡ): ರಾಜ್ಯದಲ್ಲಿ ಇದುವರೆಗೂ 512 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 20 ಮಂದಿ ಈ ಮಾರಕ ವೈರಸ್​​ಗೆ ಬಲಿಯಾಗಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗುತ್ತಿರುವುದು ಹಾಗೂ ಕಡಿಮೆ ಪ್ರಕರಣಗಳು ವರದಿಯಾಗುತ್ತಿರುವುದು ಸಮಾಧಾನಕರ ವಿಷಯ ಎನ್ನಬಹುದು.

Seal down free
3 ಗ್ರಾಮಗಳು ಸೀಲ್​​ಡೌನ್ ಮುಕ್ತ

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ 3 ಗ್ರಾಮಗಳು ಸೀಲ್​​ಡೌನ್​​​ನಿಂದ ಮುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್​​​ ಮಾಹಿತಿ ನೀಡಿದ್ದಾರೆ. ಈ ಮೂರೂ ಗ್ರಾಮಗಳಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದ ಕಾರಣ ಗ್ರಾಮಗಳನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿತ್ತು. ಆದರೆ ಈಗ ಜನರು ನಿಟ್ಟುಸಿರು ಬಿಡುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಾಲೋನಿ ಹಾಗೂ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮಗಳು ಸೀಲ್​​​ಡೌನ್​​​ನಿಂದ ಹೊರ ಬಂದಿವೆ. ಈ ಗ್ರಾಮಗಳಲ್ಲಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಏಪ್ರಿಲ್​ 18 ರಿಂದ ಸೀಲ್​​ಡೌನ್​ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಆದೇಶ ನೀಡಿದ್ದರು. ಕಳೆದ 28 ದಿನಗಳಿಂದ ಈ ಗ್ರಾಮಗಳಲ್ಲಿ ಹೊಸ ಪ್ರಕರಣ ಪತ್ತೆಯಾಗಲಿಲ್ಲ. ಅಲ್ಲದೆ ಆ ಗ್ರಾಮಗಳಲ್ಲಿ ಬಹುತೇಕ ಜನರು ಕ್ವಾರಂಟೈನ್​​​​​​​ ಅವಧಿ ಮುಗಿಸಿದ್ದು ಅವರಲ್ಲಿ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಈ ಕಾರಣ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರ ಸೂಚನೆ ಮೇರೆಗೆ ಈ ಈ ಮೂರೂ ಗ್ರಾಮಗಳನ್ನು ಸೀಲ್​​​ಡೌನ್​​​ನಿಂದ ಮುಕ್ತ ಮಾಡಲಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.