ಮಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಷನ್‌ನಿಂದ ವೆನ್ಲಾಕ್ ಆಸ್ಪತ್ರೆಯ ಕೋವಿಡ್-19 ಸೋಂಕಿತರಿಗೆ ಬಳಸಲು ಮೂರು ವೆಂಟಿಲೇಟರ್‌ಗಳನ್ನು ಇಂದು ಸಾಂಕೇತಿಕವಾಗಿ ಹಸ್ತಾಂತರ ಮಾಡಲಾಯಿತು.
ಏಳು ಲಕ್ಷ ರೂ. ಮೌಲ್ಯದ ಮೂರು ವೆಂಟಿಲೇಟರ್‌ಗಳನ್ನು ನೂತನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಅವರಿಗೆ ನೀಡಲಾಯಿತು.
ಈ ಸಂದರ್ಭ ಎಸ್‌ಬಿಐ ಮಂಗಳೂರು ವಲಯ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕ ರಾಜೇಶ್ ಗುಪ್ತ, ಪ್ರಾದೇಶಿಕ ವ್ಯವಸ್ಥಾಪಕ ಹರಿಶಂಕರ್ ಉಪಸ್ಥಿತರಿದ್ದರು.