ETV Bharat / state

ಬಂಟ್ವಾಳದ ಗ್ರಾಮದಲ್ಲಿ 29 ಮಂದಿಗೆ ಕೊರೊನಾ: ಕೋವಿಡ್​ ಕೇರ್​ ಸೆಂಟರ್​​ಗೆ ಶಿಫ್ಟ್​​

author img

By

Published : May 30, 2021, 3:39 AM IST

ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿದ್ದು, ಬಂಟ್ವಾಳದ ಒಂದೇ ಗ್ರಾಮದಲ್ಲಿ 29 ಮಂದಿಗೆ ಸೋಂಕು ತಗುಲಿದೆ.

29 people Covid postive in Bantwal
29 people Covid postive in Bantwal

ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮವೊಂದರಲ್ಲಿ ಸುಮಾರು 29 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದು, ಇವರನ್ನ ಕೋವಿಡ್​ ಕೇರ್​​ ಸೆಂಟರ್​ಗೆ ಶಿಫ್ಟ್ ಮಾಡಲಾಗಿದೆ.

ಇವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಕಾರ್ಮಿಕರಾಗಿದ್ದಾರೆ. ನೀರಪಾದೆ ಎಂಬಲ್ಲಿ ವಾಸವಾಗಿದ್ದರು. 20ಕ್ಕೂ ಅಧಿಕ ಮಂದಿಗೆ ಈ ಗ್ರಾಮದಲ್ಲಿ ಕೊರೊನಾ ಸೋಂಕು ತಗಲಿತ್ತು. ಅವರಲ್ಲಿ ಕೆಲವರು ಗುಣಮುಖರಾಗಿದ್ದರು. ಇದೀಗ ಗುಣಮುಖರಾಗದ 29 ಮಂದಿಯನ್ನು ಶನಿವಾರ ವಾಮದಪದವಿನ ಕೋವಿಡ್​ ಕೇರ್​​ ಸೆಂಟರ್​ಗೆ ಶಿಫ್ಟ್ ಮಾಡಲಾಗಿದೆ.

ಸೋಂಕಿತರಲ್ಲಿ ಓರ್ವ ಪುಟ್ಟ ಮಗುವೂ ಸೇರಿದೆ ಎಂದು ಹೇಳಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಶನಿವಾರ 99 ಮಂದಿಗೆ ಸೋಂಕು ತಗಲಿದೆ. ಇವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 7 ಸರ್ಕಾರಿ, 5 ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲೂ ಅಧಿಕ ಸಂಖ್ಯೆ ಸೋಂಕಿತರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.