ETV Bharat / state

ಕಸ್ಟಮ್ಸ್​​ ಅಧಿಕಾರಿಗಳ ಭರ್ಜರಿ ಬೇಟೆ... ಗುದದ್ವಾರದಲ್ಲಿ ಅಕ್ರಮ ಚಿನ್ನ ಇಟ್ಕೊಂಡಿದ್ದ ಖದೀಮ ಅರೆಸ್ಟ್​ - ಮಂಗಳೂರಿನಲ್ಲಿ ಅಕ್ರಮ ಚಿನ್ನ ವಶ

ಇಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹26 ಲಕ್ಷ ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್​​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

26-lakhs-worth-of-gold-seized-at-mangalore-airport
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ವಶ
author img

By

Published : Feb 26, 2020, 4:29 PM IST

Updated : Feb 26, 2020, 4:42 PM IST

ಮಂಗಳೂರು: ಇಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹26 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

26 lakhs worth of gold seized at  mangalore airport
ಮಂಗಳೂರು ವಿಮಾನ ನಿಲ್ದಾಣ

ದುಬೈದಿಂದ ಮಂಗಳೂರಿಗೆ ಬಂದ ಪ್ರಯಾಣಿಕನೋರ್ವ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ. ಚಿನ್ನವನ್ನು ದ್ರವ ರೂಪದಲ್ಲಿ ರಬ್ಬರ್ ಗುಳಿಗೆಯ ಒಳಗಿಟ್ಟಿದ್ದ. ಅದನ್ನು ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಕೇರಳದ ಉಪ್ಪಳದ ಮೊಯ್ದಿನ್ ಅರ್ಝನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯಿಂದ 24 ಕ್ಯಾರೆಟ್​​ನ 619 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಚಿನ್ನದ ಮೌಲ್ಯ ₹ 26,30,750 ಇದೆ. ಕಸ್ಟಮ್ಸ್​ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.

Last Updated : Feb 26, 2020, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.