ಮಂಗಳೂರು: ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಕೊಳಂಬಳದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗುಂಜಿಗನೂರು ಗ್ರಾಮದ ಶಿವಮೂರ್ತಿ ಅಲಿಯಾಸ್ ಶಿವಪ್ಪ ಬಂಧಿತ ಆರೋಪಿ. ಆರೋಪಿಯು ಏ.06 ರಂದು ಬೆಳ್ಳಾರೆಯ ಕೊಳಂಬಳದಲ್ಲಿರುವ ರಾಧಾ ಎಂಬವರ ಮನೆಯಿಂದ ಸುಮಾರು 11ಗ್ರಾಂ ಚಿನ್ನ ಹಾಗೂ ಬೆಳ್ಳಿಯ ಆಭರಣ ಮತ್ತು 750 ರೂ. ನಗದು ಸೇರಿ ಅಂದಾಜು 24,750 ರೂ. ಮೌಲ್ಯದ ಹಣವನ್ನು ಕಳ್ಳತನ ಮಾಡಿದ್ದನು.
ಈತನನ್ನು ಇಂದು ಕೊಳಂಬಳದಲ್ಲಿ ಪೊಲೀಸರು ಬಂಧಿಸಿದ್ದು,ಆರೋಪಿಯಿಂದ ಚಿನ್ನ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರೊಬೆಷನರಿ ಪಿಎಸ್ಐ ಸುಧಾಕರ, ಹೆಡ್ ಕಾನ್ ಸ್ಟೇಬಲ್ ಗಳಾದ ನವೀನ್, ಸತೀಶ್, ಬಾಲಕೃಷ್ಣ ಸೇರಿದಂತೆ ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.