ETV Bharat / state

ದ.‌ಕನ್ನಡದಲ್ಲಿ 247 ಸೋಂಕಿತರು ಪತ್ತೆ....ಮೂವರು ಬಲಿ - Dakshina Kannada latest news

ಜಿಲ್ಲೆಯಲ್ಲಿಂದು 247 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರ ಜೊತೆಗೆ 3 ಮಂದಿ ಮೃತಪಟ್ಟಿದ್ದಾರೆ.

Dakshina Kannada covid cases
Dakshina Kannada covid cases
author img

By

Published : Aug 25, 2020, 8:35 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ತುತ್ತಾಗಿ ಮೂವರು ಸಾವನ್ನಪ್ಪಿದ್ದಾರೆ‌. 247 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇಂದು ಮೃತಪಟ್ಟ ಮೂವರಲ್ಲಿ ಒಬ್ಬರು ಮಂಗಳೂರು ತಾಲೂಕು, ಒಬ್ಬರು ಪುತ್ತೂರು ತಾಲೂಕು ಮತ್ತು ‌ಒಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಈವರೆಗೆ ಸೋಂಕಿಗೊಳಗಾಗಿ ಸಾವನ್ನಪ್ಪಿದವರ ಸಂಖ್ಯೆ 319ಕ್ಕೆ ಏರಿಕೆಯಾಗಿದೆ.

ಇನ್ನೂ 247 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಈ ಪೈಕಿ 171 ಮಂದಿ ಮಂಗಳೂರು ತಾಲೂಕು, 48 ಮಂದಿ ಬಂಟ್ವಾಳ ತಾಲೂಕು, 6 ಮಂದಿ ಪುತ್ತೂರು ತಾಲೂಕು, 4 ಮಂದಿ ಸುಳ್ಯ ತಾಲೂಕು, 10 ಮಂದಿ ಬೆಳ್ತಂಗಡಿ ತಾಲೂಕು ಮತ್ತು 8 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 10778 ಕ್ಕೆ ಏರಿಕೆಯಾಗಿದೆ.

ಇನ್ನೂ 218 ಸೋಂಕಿತರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಈವರೆಗೆ 8,136 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 2,323 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.