ಬಂಟ್ವಾಳ: ತಾಲೂಕಿನಲ್ಲಿ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿಯೂ ಸೇರಿದಂತೆ ಒಟ್ಟು 22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಮತ್ತು ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಾಲೂಕಿನ ಇಬ್ಬರು ಆಸ್ಪತ್ರೆಗೆ ದಾಖಲಾಗಿ, ಗಂಟಲು ದ್ರವ ಪರೀಕ್ಷಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕಲ್ಲಡ್ಕ ಮೂಲದ 66 ವರ್ಷದ ವೃದ್ಧ ಹಾಗೂ 53 ವರ್ಷದ ನಾವೂರು ನಿವಾಸಿ ಮೃತಪಟ್ಟವರು. ಕಲ್ಲಡ್ಕ ನಿವಾಸಿ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಉದ್ಯಮಿಯಾಗಿದ್ದ ಅವರು ರಾಜಕೀಯ ಪಕ್ಷದಲ್ಲೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.
ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ತಾಲೂಕಿನಲ್ಲಿ ಭಾನುವಾರ 22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ವಿಟ್ಲ, ಕಸ್ಬಾ, ಕೊಯಿಲ, ಕೇಪುನಲ್ಲಿ ತಲಾ ಇಬ್ಬರಿಗೆ, ಬಾಳ್ತಿಲ, ಶಂಭೂರು, ಕೊಳ್ನಾಡು, ಬಿ.ಮೂಡ, ಮಂಚಿ, ನೆಟ್ಲಮುಡ್ನೂರು, ಭಂಡಾರಿಬೆಟ್ಟು, ನಾವೂರು, ತಾಳಿಪಡ್ಪು, ತುಂಬೆ, ನರಿಕೊಂಬು, ಮಾಣಿಯಲ್ಲಿ ತಲಾ ಒಬ್ಬೊಬ್ಬರಿಗೆ ಸೋಂಕು ದೃಢಪಟ್ಟಿದೆ.