ಮಂಗಳೂರು: ಎನ್ ಎಂ ಪಿ ಟಿ ಯಿಂದ ಹೊರಟಿದ್ದ ಹೂಳು ತೆಗೆಯುವ ಡ್ರಜ್ಜರ್ ಹಡಗು ಅರಬ್ಬಿ ಸಮುದ್ರದ ಮಧ್ಯೆ ಚುಕ್ಕಾಣಿ ತುಂಡಾದ ಪರಿಣಾಮ ಅಪಾಯಕ್ಕೊಳಗಾಗಿದ್ದು, ಡ್ರಜ್ಜರ್ ನಲ್ಲಿದ್ದ 15 ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಮುಂಬಯಿ ಮೂಲದ ಮರ್ಕೆಟರ್ ಸಂಸ್ಥೆಯ ಡ್ರೆಡ್ಜರ್ ಭಗವತಿ ಪ್ರೇಮ್ ಅಪಾಯಕ್ಕೊಳಗಾಗಿರುವ ಹಡಗು. ನವ ಮಂಗಳೂರು ಬಂದರು ಸಮೀಪದ ಚಿತ್ರಾಪುರ ಬಳಿ ಈ ಡ್ರಡ್ಜರ್ ತರಲಾಗಿದ್ದು ಸದ್ಯ ಇದು ಮುಳುಗುವ ಭೀತಿ ಎದುರಾಗಿದೆ.
ಕೋರಿದೇವ್ ಪ್ರೇಮ್ ಎಂಬ ಹಡಗು ಕೂಡ ಮಂಗಳೂರಿನಲ್ಲಿ ಇತ್ತೀಚೆಗೆ ಮುಳುಗಡೆಯಾಗಿ ಕೋಟ್ಯಾಂತರ ರೂ ನಷ್ಟವಾಗಿತ್ತು