ಮಂಗಳೂರು: ದ.ಕ ಜಿಲ್ಲೆಯಲ್ಲಿ ಇಂದು 147 ಮಂದಿಗೆ ಸೋಂಕು ತಗುಲಿದೆ. ಅಂತಾರಾಷ್ಟ್ರೀಯ ಪ್ರಯಾಣದಿಂದ ಅಂದರೆ ಸೌದಿ ಅರೇಬಿಯಾ, ಮಸ್ಕತ್, ಮಲೇಷಿಯಾ ಹಾಗೂ ದುಬೈನಿಂದ ಬಂದ 10 ಮಂದಿಯಲ್ಲಿ ಹಾಗೂ ಮುಂಬೈ, ಬೆಂಗಳೂರು ಹಾಗೂ ಬಿಹಾರದಿಂದ ಬಂದ 7ಮಂದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.
ಅದೇ ರೀತಿ ILI (Influenza Like Illness) ಪ್ರಕರಣದಲ್ಲಿ 40 ಮಂದಿಗೆ, SARI (Severe Acute Respiratory Influence) ಪ್ರಕರಣದಲ್ಲಿ 2 ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 35ಮಂದಿಗೆ, ರ್ಯಾಂಡಮ್ ತಪಾಸಣೆಯಿಂದ 48 ಮಂದಿಗೆ ಹಾಗೂ ಶಸ್ತ್ರಚಿಕಿತ್ಸೆಗಿಂತ ಮೊದಲು ತಪಾಸಣೆ ಮಾಡಿದಾಗ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
38 ಮಂದಿ ಗುಣಮುಖ : ಜಿಲ್ಲೆಯಲ್ಲಿ 2 ವರ್ಷದ ಗಂಡು ಮಗು ಹಾಗೂ 6 ವರ್ಷದ ಇಬ್ಬರು ಗಂಡು ಮಕ್ಕಳು ಸೇರಿ 38 ಮಂದಿ ಇಂದು ಗುಣಮುಖರಾಗಿದ್ದಾರೆ. ಇವರ ಗಂಟಲು ದ್ರವ ಪರೀಕ್ಷೆಯಲ್ಲಿ ಎರಡು ಬಾರಿ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆ, ಗುಣಮುಖ ಎಂದು ಘೋಷಿಸಿ ಮನೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 1232 ಸೋಂಕು ಪ್ರಕರಣ ಪತ್ತೆಯಾಗಿವೆ. 554 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈವರೆಗೆ 22 ಮಂದಿ ಸಾವನ್ನಪ್ಪಿದ್ದು, 666 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 378 ಮಂದಿಯ ವರದಿಯಲ್ಲಿ 147 ಪಾಸಿಟಿವ್ ಮತ್ತು 231 ಮಂದಿಗೆ ನೆಗೆಟಿವ್ ಬಂದಿವೆ. ಇಂದು ಯಾವುದೇ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗದಿದ್ದರೂ ಈ ಹಿಂದೆ ಕಳುಹಿಸಲಾಗಿರುವ 427 ಮಂದಿಯ ತಪಾಸಣಾ ವರದಿಗಾಗಿ ಕಾಯಲಾಗುತ್ತಿದೆ.