ETV Bharat / state

10 ಅಪಾರ್ಟ್​ಮೆಂಟ್​ಗಳಿಗೆ 1.45 ಲಕ್ಷ ರೂ ದಂಡ ವಿಧಿಸಿದ ಮಂಗಳೂರು ಪಾಲಿಕೆ!

ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು‌ ನಿರ್ಮಿಸದ 10 ಅಪಾರ್ಟ್‌ಮೆಂಟ್​ಗಳಿಗೆ ಮಂಗಳೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ.

Mangalore metropolitan city
ಮಂಗಳೂರು ಮಹಾನಗರ ಪಾಲಿಕೆ
author img

By

Published : Feb 20, 2020, 7:57 PM IST

ಮಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು‌ ನಿರ್ಮಿಸದ 10 ಅಪಾರ್ಟ್‌ಮೆಂಟ್​​ಗಳಿಗೆ ಮಂಗಳೂರು ಮಹಾನಗರ ಪಾಲಿಕೆ 1.45 ಲಕ್ಷ ರೂ. ದಂಡ ವಿಧಿಸಿದೆ.

ತ್ಯಾಜ್ಯ ಸಂಸ್ಕರಣಾ ತಂತ್ರಜ್ಞಾನವನ್ನು ಹೊಂದಿರುವ ಸಂಸ್ಥೆಗಳನ್ನು ಕರೆದು ಪ್ರಾತ್ಯಕ್ಷಿಕೆಯನ್ನು ಅಪಾರ್ಟ್​ಮೆಂಟ್​​ಗಳಲ್ಲಿ ಆಯೋಜಿಸಲಾಗಿತ್ತು. ಅಲ್ಲದೇ ಹಲವು ಸಭೆಗಳನ್ನು ಕರೆದು‌‌ ತ್ಯಾಜ್ಯ ಉತ್ಪಾದಿಸುವ ಅಪಾರ್ಟ್​ಮೆಂಟ್​​ಗಳಿಗೆ ಹಸಿತ್ಯಾಜ್ಯ ಸಂಸ್ಕರಣೆ ಬಗ್ಗೆ ಮಾಹಿತಿ ನೀಡಲಾಗಿತ್ತು.‌ ಫೆ.7ರಂದು ಸಭೆ ಕರೆದು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸದಿದ್ದಲ್ಲಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಆದರೆ, ಈವರೆಗೆ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸದ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಮ್ಮೆಕೆರೆಯ ಕೊರೊಲ್ ಅಪಾರ್ಟ್‌ಮೆಂಟ್, ಎಂ.ಆರ್.ಭಟ್ ಲೇನ್ ಸಮೀಪದ ಎಚ್.ಎಚ್.ಡೈಮಂಡ್ ಸಿಟಿ, ಮಾರ್ನಮಿಕಟ್ಟೆಯ ಜೂಲ್ಸ್ ಮಾಸ್ಟರ್ ಪೀಸ್, ಪಾಂಡೇಶ್ವರದ ಪರ್ಲ್ ಅಪಾರ್ಟ್‌ಮೆಂಟ್, ಪಿವಿಎಸ್ ಬಳಿಯಿರುವ ಮೌರಿಷ್ಕಾ ಪಾರ್ಕ್, ವೆಲೆನ್ಸಿಯಾದ ಡೈನಾಸ್ಟಿ ಅಪಾರ್ಟ್‌ಮೆಂಟ್, ಕೈಕಂಬ ಮಾರ್ಕೆಟ್ ಬಳಿಯಿರುವ ಹೈ - ಸ್ಟ್ರೀಕ್ ಅಪಾರ್ಟ್‌ಮೆಂಟ್, ಕೈಕಂಬ ಮಾರ್ಕೆಟ್ ಬಳಿಯಿರುವ ಪ್ಲಾಮಾ ಐಕಾನ್, ಮರಿಯಾ ನಗರದಲ್ಲಿರುವ ಶಲೋಮ್ ಅಪಾರ್ಟ್‌ಮೆಂಟ್, ವೆಲೆನ್ಸಿಯಾದ ರಾಯಲ್ ಪಾರ್ಕ್ ಅಪಾರ್ಟ್‌ಮೆಂಟ್​​ಗಳಿಗೆ ಮಂಗಳೂರು ಮಹಾನಗರ ಪಾಲಿಕೆ 1 ಲಕ್ಷದ 45 ಸಾವಿರ ರೂ. ದಂಡ ವಿಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.