ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಮಂದಿ ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 10 ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 4 ಮಂದಿ ಪಿಎಫ್ಐ ಮುಖಂಡರನ್ನು ಪೊಲೀಸರು ಬಂಧಿಸಿದ್ಧಾರೆ.
![14-pfi-leaders-arrested-in-mangaluru](https://etvbharatimages.akamaized.net/etvbharat/prod-images/16495979_thumb2322.jpg)
ಮುಹಮ್ಮದ್ ನೌಫಲ್ ಹಂಝ, ಮುಜೈರ್ ಕುದ್ರೋಳಿ, ಶರೀಫ್ ಪಾಂಡೇಶ್ವರ, ನವಾಜ್ ಉಳ್ಳಾಲ, ಮುಹಮ್ಮದ್ ಇಕ್ಬಾಲ್ ಉಳಾಯಿಬೆಟ್ಟು, ಇಸ್ಮಾಯಿಲ್ , ನಝೀರ್, ಶಬೀರ್ ಅಹಮದ್, ನೌಶದ್ ಚೊಕ್ಕಬೆಟ್ಟು, ಇಬ್ರಾಹಿಂ ಮೂಡಬಿದಿರೆ,ರಾಜಿಕ್, ಫಿರೋಜ್, ಇಜಾಜ್ ಅಹಮದ್, ಜಾಬೀರ್ ಅರಿಯಡ್ಕ ಎಂಬುವರೇ ಬಂಧಿತರು.
![14-pfi-leaders-arrested-in-mangaluru](https://etvbharatimages.akamaized.net/etvbharat/prod-images/16495979_thumb3444.jpg)
ಇನ್ನು ಪೊಲೀಸರು ಬಂಧಿಸಬೇಕಿದ್ದ ಓರ್ವ ಮುಖಂಡನಿಗೆ ಆರೋಗ್ಯ ಸಮಸ್ಯೆ ಕಾರಣ ಆಸ್ಪತ್ರೆಯಲ್ಲಿ ಇರುವುದರಿಂದ ಇಂದು ಬಂಧನವಾಗಿಲ್ಲ. ಆತ ಡಿಸ್ಚಾರ್ಜ್ ಆದ ಬಳಿಕ ಬಂಧಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೇಶದಲ್ಲಿ ಪಿಎಫ್ಐ ಶಾಶ್ವತವಾಗಿ ಬ್ಯಾನ್ ಮಾಡಬೇಕು: ಬಸನಗೌಡ ಪಾಟೀಲ್ ಯತ್ನಾಳ್