ಪುತ್ತೂರು: ಕೆಲವರಿಗೆ ಭಗವಂತ ಹುಟ್ಟುವಾಗಲೇ ಕೆಲ ನ್ಯೂನ್ಯತೆಗಳನ್ನು ಕೊಟ್ಟಿದ್ದಾನೆ. ಆಂತಹ ಕುಟುಂಬದ ಕಣ್ಣೀರನ್ನು ಒರೆಸುವ ಕೆಲಸ ಇಂದು ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿ. ಸಂಸ್ಥೆಯ ಸಿಎಫ್‌ಆರ್‌ಎಫ್‌ನ 4,12,080 ರೂ.ಗಳ ಅನುದಾನದಲ್ಲಿ ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೇಷನ್ ಆಫ್ ಇಂಡಿಯಾ, ಜಿಲ್ಲಾ ಆಡಳಿತ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಇಂಡಿಯನ್ ರೆಡ್‌ಕ್ರಾಸ್ ಘಟಕದಿಂದ ವಿಶೇಷಚೇತನರಿಗೆ ಸುಮಾರು 114 ಕೃತಕ ಅಂಗಾಗ ಮತ್ತು ವಿವಿಧ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.
ವಿತರಣೆ ಬಳಿಕ ಮಾತನಾಡಿದ ಶಾಸಕರು, ಹಲವು ಮಂದಿ ವಿಶೇಷಚೇತನರು ಇತರರಿಗೆ ಏನೂ ಕಡಿಮೆ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ಅಂಗಾಂಗ ವೈಫಲ್ಯತೆ ಇದ್ದರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ದಿವ್ಯಾಂಗ ಚೇತನರಿಗೆ ಜೀವನದಲ್ಲಿ ಮುಂದೆ ಬರಲು ಪ್ರೋತ್ಸಾಹದ ಅಗತ್ಯವಿದೆ. ಅವರಿಗೆ ಅನುಕಂಪದ ಅಗತ್ಯವಿಲ್ಲ, ತಾ.ಪಂ. ವತಿಯಿಂದ ಅವರ ಮನೆ ರಿಪೇರಿ, ರಸ್ತೆ ದುರಸ್ತಿಗೆ ಅನುದಾನ ಇಡಲಾಗಿದೆ. ಈ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ತಾ.ಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್, ಯಮುನಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್, ಶಿವಪ್ರಕಾಶ್ ಅಡ್ಪಂಗಾಯ ಮತ್ತಿತರರು ಉಪಸ್ಥಿತರಿದ್ದರು.