ಅನಾಮಧೇಯ ಬೆದರಿಕೆ ಪತ್ರ: ಪೊಲೀಸರಿಗೆ ದೂರು ನೀಡಿದ ಕಾದಂಬರಿಕಾರ ವೇಣು - Threat letter to writer Venu
ಅನಾಮಧೇಯ ಬೆದರಿಕೆ ಪತ್ರ ವಿಚಾರ ಸಂಬಂಧ ಕಾದಂಬರಿಕಾರ ಬಿ.ಎಲ್.ವೇಣು ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
![ಅನಾಮಧೇಯ ಬೆದರಿಕೆ ಪತ್ರ: ಪೊಲೀಸರಿಗೆ ದೂರು ನೀಡಿದ ಕಾದಂಬರಿಕಾರ ವೇಣು writer venu-complains-about-anonymous-threat-letter](https://etvbharatimages.akamaized.net/etvbharat/prod-images/768-512-15817831-thumbnail-3x2-news.jpg?imwidth=3840)
ಚಿತ್ರದುರ್ಗ: ಅನಾಮಧೇಯ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಕಾದಂಬರಿಕಾರ ಬಿ.ಎಲ್.ವೇಣು ನಗರದ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕು. 61 ಸಾಹಿತಿಗಳಿಗೂ ಬುದ್ದಿ ಹೇಳಿ ಎಂದೆಲ್ಲ ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು.
ಈ ಪತ್ರ ಬರೆದವರ ವಿರುದ್ಧ ಕ್ರಮಕ್ಕೆ ಬಿ.ಎಲ್.ವೇಣು ಆಗ್ರಹಿಸಿದ್ದಾರೆ. ಐಪಿಸಿ ಸೆಕ್ಷನ್ 504, 507ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಂಚೆ ಮೂಲಕ ವೇಣು ಅವರ ನಗರದ ಮುನ್ಸಿಪಲ್ ಕಾಲೋನಿ ನಿವಾಸಕ್ಕೆ ಪತ್ರ ರವಾನಿಸಲಾಗಿತ್ತು. ಈ ಹಿಂದೆ ಜೂನ್ 22ರಂದು ಸಹ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ರವಾನಿಸಿದ್ದರು.
ಸಾವರ್ಕರ್ ಕುರಿತಾಗಿ ನೀವು ಹೀಯಾಳಿಸಿ ಮಾತನಾಡಿರುವುದು ನಿಮಗೆ ಶೋಭೆ ತರಲ್ಲ, ದಯವಿಟ್ಟು ಕ್ಷಮೆ ಕೇಳಿ. ಹುಟ್ಟಿದ ದೇಶದ ಬಗ್ಗೆ ನಿಮಗೆ ಯಾಕೆ ಹೀನ ಭಾವನೆ? ವೇಣು ಅವರೇ ಇತರ ಸಾಹಿತಿಗಳಿಗೂ ಬುದ್ದಿ ಹೇಳಿ, ಇಲ್ಲ ಕಾಲನ ಉಪಚಾರಕ್ಕೆ ಸಿದ್ಧರಾಗಿ ಎಂದು ಬೆದರಿಕೆ ಹಾಕಲಾಗಿತ್ತು.
ಇದನ್ನೂ ಓದಿ: ಕಾದಂಬರಿಕಾರ ಬಿ.ಎಲ್.ವೇಣುರಿಗೆ ಅನಾಮಧೇಯ ಪತ್ರ; ಸಾವರ್ಕರ್ ಹೇಳಿಕೆೆಗೆ ಕ್ಷಮೆ ಕೇಳಲು ಆಗ್ರಹ