ETV Bharat / state

ಸೆ.04 ಕ್ಕೆ ಭದ್ರೆಯಿಂದ ವಾಣಿವಿಲಾಸ ಸಾಗರಕ್ಕೆ ಅಧಿಕೃತವಾಗಿ ನೀರು: ಶಾಸಕ ತಿಪ್ಪಾರೆಡ್ಡಿ

ಸೆ.04 ಕ್ಕೆ ಭದ್ರೆಯಿಂದ ವಾಣಿವಿಲಾಸ ಸಾಗರಕ್ಕೆ ಅಧಿಕೃತವಾಗಿ ನೀರು ಹರಿಸಲಾಗುತ್ತಿದೆ. ಈ ಕುರಿತು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

MLA Tippa reddy
MLA Tippa reddy
author img

By

Published : Sep 2, 2020, 9:22 PM IST

ಚಿತ್ರದುರ್ಗ: ಜಿಲ್ಲೆಯ ಬಹು ವರ್ಷಗಳ ಕನಸು ನನಸಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕೊನೆಯ ಹಂತ ತಲುಪಿದ್ದು, ಸೆ.04 ಕ್ಕೆ ವಿವಿ ಸಾಗರಕ್ಕೆ ಭದ್ರೆ ಹರಿಯಲಿದ್ದಾಳೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕರು, ನೀರು ಹರಿಸುವ ಬಗ್ಗೆ ವಿಶ್ವೇಶ್ವರಯ್ಯ ಜಲ ನಿಗಮದ ಅಭಿಯಂತರರು ಸರ್ಕಾರದ ಅಧಿಕೃತ ಪತ್ರದ ಮೂಲಕ ಶಾಸಕರಿಗೆ ನೀರು ಹರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆ.02 ಕ್ಕೆ ನೀರು ಹರಿಬೇಕಾಗಿತ್ತು. ಅನಿವಾರ್ಯದ ಕಾರಣಗಳಿಂದಾಗಿ ಅದು ಸಾಧ್ಯವಾಗಿಲ್ಲ. ಆದ್ದರಿಂದ ಸೆ.04 ಕ್ಕೆ ಅಧಿಕೃತವಾಗಿ ನೀರು ಹರಿಸಲಾಗುತ್ತಿದೆ.

ಈಗಾಗಲೇ ಪ್ರಯೋಗಿಕವಾಗಿ ಸತತ ಮೂರು ಬಾರಿ ಭದ್ರೆಯಿಂದ ವಿವಿ ಸಾಗರಕ್ಕೆ ನೀರು ಹರಿಸಲಾಗಿದ್ದು, ಅದು ಯಶಸ್ವಿಯಾದ ಬಳಿಕ ನಾಲ್ಕನೇ ಬಾರಿ ವಿವಿ ಸಾಗರಕ್ಕೆ ಅಧಿಕೃತವಾಗಿ ಹರಿಲಾಗುತ್ತದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

ಭದ್ರಾ ಜಲಾಯಶದಲ್ಲಿ ಲಭ್ಯವಿರುವ ನೀರನ್ನು ಭದ್ರಾ ಮೇಲ್ದಂಡೆ ಮುಖ್ಯ ಕಾಲುವೆ ಮೂಲಕ ಅಜ್ಜಂಪುರ ತಾಲೂಕಿನ ಹೆಬ್ಬೂರು ಗ್ರಾಮದ ಬಳಿಯ ವೇದಾವತಿ ನದಿಯ ಮೂಲಕ ವಿವಿ ಸಾಗರಕ್ಕೆ 2 ಟಿಎಮ್ ಸಿ ನೀರು ಹರಿಯಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.