ETV Bharat / state

ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲೇ ಕೈಗೆ ಮತ್ತೊಂದು ಗೆಲುವು! - undefined

ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ಕೈಗೆ ಮತ್ತೊಂದು ಐತಿಹಾಸಿಕ ಗೆಲುವು ದೊರೆತಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಬಾಗೂರು ಕ್ಷೇತ್ರದ ಕೈ ಸದಸ್ಯೆಯಾದ ವಿಶಾಲಾಕ್ಷಿ ನಟರಾಜನ್ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪಂಚಾಯತ್​ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ನಟರಾಜನ್ ಆಯ್ಕೆ
author img

By

Published : Mar 23, 2019, 7:05 PM IST

ಚಿತ್ರದುರ್ಗ : ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ಕೋಟೆನಾಡಿನಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಲೋಕ ಸಮರದ ಹೊಸ್ತಿಲಿನಲ್ಲೇ ಕೈಗೆ ಮತ್ತೊಂದು ಐತಿಹಾಸಿಕ ಗೆಲುವು ಸಂದಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕಮಲಕ್ಕೆ ಸೆಡ್ಡು ಹೊಡೆದಿದೆ. ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ಕೈಗೆ ಮತ್ತೊಂದು ಐತಿಹಾಸಿಕ ಗೆಲುವು ದೊರೆತಿದ್ದು, ಅಧಿಕಾರವನ್ನು ಹಿಡಿಯಲು ಹೊರೆಟ್ಟಿದ್ದ ಕಮಲ ಪಾಳಯಕ್ಕೆ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಗೆ ಸೆಡ್ಡು ಹೊಡೆದಿದೆ.

ಚಿತ್ರದುರ್ಗ ಜಿಲ್ಲಾ ಪಂಚಾಯತ್​ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ನಟರಾಜನ್ ಆಯ್ಕೆ

15 ತಿಂಗಳ ಅಧಿಕಾರದ ಅವಧಿ ಮುಗಿದಿದ್ದರೂ ಈ ಹಿಂದಿನ ಅಧ್ಯಕ್ಷೆಯಾದಂತಹ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ನಿರಾಕರಿಸಿದ್ದರು. ಇದರಿಂದ ಜಿ.ಪಂ. ಸದಸ್ಯರ ಕೆಂಗಣಿಗೆ ಗುರಿಯಾಗಿದ್ದಂತಹ ಸೌಭಾಗ್ಯ ಬಸವರಾಜನ್​ರವರ ವಿರುದ್ಧ ಅವಿಶ್ವಾಸ ಮಂಡನೆಯನ್ನು ಯಾಚಿಸಲಾಗಿತ್ತು. 37 ಜನ ಸದಸ್ಯರ ಪೈಕಿ 27 ಮಂದಿ ಭಾಗವಹಿಸಿದ್ರು. ಹೀಗಾಗಿ ತಮ್ಮ ಪರ ಕೇವಲ ಎರಡು ಮತಗಳನ್ನು ಪಡೆದ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಕುರ್ಚಿಯನ್ನು ಉಳಿಸಿಕೊಳ್ಳಲಾರದೆ ಹೊರ ನಡೆದರು. ಅಂದು ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಾಗೂರು ಕ್ಷೇತ್ರದ ಕೈ ಸದಸ್ಯೆಯಾದ ವಿಶಾಲಾಕ್ಷಿ ನಟರಾಜನ್ ಅಧ್ಯಕ್ಷೆಯಾಗಿ ನಗೆ ಬೀರಿದರು.

ಇನ್ನು ಕೆಲ ಜಿ.ಪಂ. ಸದಸ್ಯರನ್ನು ಹಿಡಿದಿಟ್ಟುಕೊಂಡು ವಾಮಾ ಮಾರ್ಗದಲ್ಲಿ ಅಧಿಕಾರವನ್ನು ಹಿಡಿಯಲು ಹೊರಟ್ಟಿದ್ದ ಬಿಜೆಪಿಗೆ ಮಾಜಿ ಸಚಿವ ಹೆಚ್ ಆಂಜನೇಯ ಅವರು ಆಕ್ರೋಶ ವ್ಯಕ್ತಪಡಿಸುವ ಮೂಲಕ ನೂತನ ಅಧ್ಯಕ್ಷೆಗೆ ಶುಭಕೋರಿದರು.

Intro:ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲೇ ಕೈಗೆ ಮತ್ತೊಂದು ಗೆಲವು
ಚಿತ್ರದುರ್ಗ :- ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ಕೋಟೆನಾಡಿನಲ್ಲಿ ಚುನಾವಣ ಚಟುವಟಿಕೆಗಳು ಗರಿಗೆದರಿವೆ, ಲೋಕ ಸಮರದ ಹೊಸ್ತಿಲಿನಲ್ಲೇ ಕೈಗೆ ಮತ್ತೊಂದ ಐತಿಹಾಸಿಕ ಗೆಲುವು ಸಂದಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಗಾದಿಯನ್ನು ಮುಡಿಗೇರಿಸುಕೊಳ್ಳುವ ಮೂಲಕ ಕಮಲಕ್ಕೆ ಸೆಡ್ಡು ಹೊಡೆದಿದೆ.
ಲೋಕ ಸಭಾ ಚುನಾವಣೆ ಹೊಸ್ತಿಲಿನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ಕೈಗೆ ಮತ್ತೊಂದು ಐತಿಹಾಸಿಕ ಗೆಲುವು ಸಂದ್ದಿದೆ. ವಾಮ ಮಾರ್ಗದಲ್ಲಿ ಅಧಿಕಾರವನ್ನು ಹಿಡಿಯಲು ಹೊರೆಟ್ಟಿದ್ದ ಕಮಲ ಪಾಳಯಕ್ಕೆ ಕಾಂಗ್ರೆಸ್ ಜಿಲ್ಲಾಪಂಚಾಯಿತಿ ಅಧ್ಯಕ್ಷಗಿರಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಲೋಕಸಭಾ ಚುನವಣಕ್ಕೆ ಸೆಡ್ಡು ಹೊಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ರವರಿಂದ ಪದಚ್ಯುತಿಯಾಗಿದ್ದ ಅಧ್ಯಕ್ಷ ಗಾದಿಗಾಗಿ ಚುನಾವಣಧಿಕಾರಿ ಶಿವಯೋಗಿ ಕಳಸದ್ ನೇತೃತ್ವದಲ್ಲಿ ನಡೆದಂತಹ ಚುನಾವಣೆಯಲ್ಲಿ ಹೊಸದುರ್ಗ ತಾಲೂಕಿನ ಬಾಗೂರು ಕ್ಷೇತ್ರದ ವಿಶಾಲಾಕ್ಷಿ ನಟರಾಜ್ ಅವಿರೋಧವಾಗಿ ಆಯ್ಕೆಯಾಗಿ ನಗೆಬೀರಿದರು. ಇನ್ನೂ ಕೆಲ ಜಿಪಂ ಸದಸ್ಯರನ್ನು ಹಿಡಿದಿಟ್ಟುಕೊಂಡು ವಾಮಾ ಮಾರ್ಗದಲ್ಲಿ ಅಧಿಕಾರವನ್ನು ಹಿಡಿಯಲು ಹೊರಟ್ಟಿದ್ದ ಬಿಜೆಪಿಗೆ ಮಾಜಿ ಸಚಿವ ಹೆಚ್ ಆಂಜನೇಯರವರು ಆಕ್ರೋಶವ್ಯಕ್ತಪಡಿಸುವ ಮೂಲಕ ನೂತನ ಅಧ್ಯಕ್ಷೆಗೆ ಶುಭಕೋರಿದರು.
ಬೈಟ್ :- 01 ಹೆಚ್ ಆಂಜನೇಯ, ಮಾಜಿ ಸಚಿವ
ಇನ್ನೂ 15 ತಿಂಗಳ ಅಧಿಕಾರದ ಅವಧಿ ಮುಗಿದಿದ್ದರೂ ಈ ಹಿಂದಿನ ಅಧ್ಯಕ್ಷೆಯಾದಂತಹ ಸೌಭಾಗ್ಯ ಬಸವರಾಜನ್ ಅಧಿಕಾರದ ದಾಹದಿಂದ ಅಧ್ಯಕ್ಷ ಗಾದಿಯನ್ನು ಬಿಟ್ಟುಕೊಡಲು ನಿರಕರಿಸಿದ್ದರು. ಇದರಿಂದ ಜಿಪಂ ಸದಸ್ಯರ ಕೆಂಗ್ಗಣಿಗೆ ಗುರಿಯಾಗಿದ್ದಂತಹ ಸೌಭಾಗ್ಯ ಬಸವರಾಜನ್ ರವರ ವಿರುದ್ಧ ಅವಿಶ್ವಾಸ ಮಂಡನೆಯನ್ನು ಯಾಚಿಸಲಾಗಿತ್ತು. 37 ಜನ್ರ ಸದಸ್ಯರ ಪೈಕಿ 27 ಮಂದಿ ಭಾಗವಹಸಿದ್ರು. ಹೀಗಾಗಿ ತಮ್ಮ ಪರ ಕೇವಲ ಎರಡು ಮತಗಳನ್ನು ಪಡೆದ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಕುರ್ಚಿಯನ್ನು ಉಳಿಸಿಕೊಳ್ಳಲಾರದೆ ಹೊರನಡೆದಿದ್ದರು. ಅಂದು ತೆರವಾದ ಅಧ್ಯಕ್ಷ ಗಾದಿಗೆ ಇಂದು ನಡೆದ ಚುನಾವಣೆಯಲ್ಲಿ ಬಾಗೂರಿನ ಕ್ಷೇತ್ರದ ಕೈ ಸದಸ್ಯೆಯಾದ ವಿಶಾಲಾಕ್ಷಿ ನಟರಾಜನ್ ಅಧ್ಯಕ್ಷೆಯಾಗಿ ನಗೆ ಬೀರಿದರು.
ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಡೆದಂತಹ ಅಧ್ಯಕ್ಷರ ಚುನಾವಣೆಯಲ್ಲಿ ವಿಪ್ ಜಾರಿ ಮಾಡದ ಕಾರಣ ನಾಲ್ವರು ನಾಮಪತ್ರಗಳನ್ನು ಸಲ್ಲಿಸಿದ್ದರು. ಅದ್ರೇ ಮಾಜಿ ಸಚಿವ ಹೆಚ್ ಆಂಜನೇಯ, ಸಂಸದ ಬಿಎನ್ ಚಂದ್ರಪ್ಪ, ಚಳ್ಳಕೆರೆ ಶಾಸಕ ರಘೂಮೂರ್ತಿ ಎಲ್ರೂ ಒಗ್ಗೂಡಿ ನಾಮ ಪತ್ರಗಳನ್ನು ಹಿಂಪಡೆಯುವಂತೆ ಮನವೋಲಿಸಿ ವಿಶಾಲಾಕ್ಷಿನಟರಾಜ್ ರವರಿಗೆ ಅವಿರೋಧವಾಗಿ ಆಯ್ಕೆ ಮಾಡುವಂತೆ ಮಾಡಿದರು.
ಒಟ್ಟಾರೆ ಶಿವಯೋಗಿ ಕಳಸದ್ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿನಡೆದಂತಹ ಚುನಾವಣೆ ಯಾವುದೇ ಗಲಾಟೆ ಇಲ್ಲದೆ ಸುಗಮವಾಗಿ ನಡೆದಿದೆ. ಇಷ್ಟು ದಿನಗಳ ಕಾಲ ಖಾಲಿ ಇದ್ದಂತ ಅಧ್ಯಕ್ಷರ ಗಾದಿ ಕಾಂಗ್ರೆಸ್ ಕೈ ವಶವಾಗಿದ್ದು, ಬಿಜೆಪಿಗೆ ಮುಖಭಂಗವಾಗಿದಂತೂ ಸುಳ್ಳಲ್ಲ.

Body:zpConclusion:fight

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.