ETV Bharat / state

ನರೇಗಾ ಕಾಮಗಾರಿ ಅಕ್ರಮ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಮಧ್ಯವರ್ತಿಗಳಿಂದ ಥಳಿತ? - narega scheme issue in chitradurga

ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಜಿಗೆರೆ ಗ್ರಾಮದಲ್ಲಿ ನರೇಗಾ ಕಾಮಗಾರಿ ವೇಳೆ ಕಾರ್ಮಿಕರನ್ನು ಬಳಸಿಕೊಳ್ಳದೆ ಜೆಸಿಬಿ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ‌ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಪ್ರಕರಣ ಕೇಳಿ ಬಂದಿದೆ.

narega scheme issue in chitradurga
ನರೇಗಾ ಕಾಮಗಾರಿ
author img

By

Published : Mar 16, 2021, 3:40 PM IST

ಚಿತ್ರದುರ್ಗ: ನರೇಗಾ ಕಾಮಗಾರಿ ಅಕ್ರಮ ಪ್ರಶ್ನಿಸಿದ್ದಕ್ಕೆ ಜನರಿಗೆ ಹಲ್ಲೆ ನಡೆಸಿದ ಆರೋಪ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಜಿಗೆರೆ ಗ್ರಾಮದಲ್ಲಿ ಕೇಳಿ ಬಂದಿದೆ.
ಕಾರ್ಮಿಕರನ್ನು ಬಳಸಿಕೊಳ್ಳದೆ ಜೆಸಿಬಿ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ‌ ಎಂದು ಕೆಲವು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಕಾಮಗಾರಿ ವಿಚಾರವಾಗಿ ಮಧ್ಯವರ್ತಿಗಳ ಹಾಗೂ ಗ್ರಾಮಸ್ಥರ ವಾಗ್ವಾದಕ್ಕೆ ಕಾರಣವಾಗಿದೆ. ಮಾತಿನ ಚಕಮಕಿ ಅತಿರೇಕಕ್ಕೇರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳದೆ ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿರುವ ಅಕ್ರಮದ ವಿಡಿಯೋ ಮಾಡುತ್ತಿದ್ದ ಗ್ರಾಮಸ್ಥರ ಮೇಲೆ ಹಿಗ್ಗಾಮುಗ್ಗ ಥಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಗ್ರಾಮಸ್ಥರಿಗೆ ಮಧ್ಯವರ್ತಿಗಳಿಂದ ಥಳಿತ ಆರೋಪ
ಇನ್ನು ಯಂತ್ರಗಳ ಸಹಾಯದಿಂದ ಕಾಮಗಾರಿ ನಡೆಸಲಾಗುವುದು ಏಕೆ ಎಂದು ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಮುಗಿಬಿದ್ದ ಟೆಂಡರ್​ದಾರರು, ಮಧ್ಯವರ್ತಿಗಳು ಯಾಕೆ ವಿಡಿಯೋ ಮಾಡ್ತೀರಾ ಅಂತಾ ಬಂಜಿಗೆರೆ ಗ್ರಾಮದ ಜಗದೀಶ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ತಳುಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಪ್ರತಿ ಪಂಚಾಯತ್​​ನಲ್ಲಿಯೂ ಒಂದು ಪಬ್ಲಿಕ್​ ಶಾಲೆ ತೆರೆಯಬೇಕು : ಶಾಸಕ ಶಿವಲಿಂಗೇಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.