ಚಿತ್ರದುರ್ಗ: ಜಿಲ್ಲೆಯ ವೇದಾಂತ ಕಬ್ಬಿಣ ಅದಿರು ಖಾಸಗಿ ಕಂಪನಿ ವತಿಯಿಂದ 1,000 ಪಡಿತರ ಕಿಟ್‌ಗಳನ್ನು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಹಸ್ತಾಂತರಿಸಲಾಯಿತು.
ಪಡಿತರ ಕಿಟ್‌ಗಳನ್ನು ವೇದಾಂತ ಕಬ್ಬಿಣ ಅದಿರು ವ್ಯವಹಾರ-ಕರ್ನಾಟಕ ಕಂಪನಿಯ ಪರವಾಗಿ ಮೇಘನಾ ಘೋಷ್, ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಮಾ ಮಹಾದೇವನ್ ರವರಿಗೆ ಹಸ್ತಾಂತರ ಮಾಡಿದರು.
ಈ ಪಡಿತರ ಕಿಟ್‌ಗಳನ್ನು ವಲಸೆ ಕಾರ್ಮಿಕರಿಗೆ ನೀಡುವ ಸಲುವಾಗಿ ಒದಗಿಸಲಾಗುತ್ತಿದ್ದು, ಅಕ್ಕಿ, ಗೋಧಿ ಹಿಟ್ಟು, ಆಲೂಗಡ್ಡೆ, ಈರುಳ್ಳಿ, ಸಂಸ್ಕರಿಸಿದ ಎಣ್ಣೆ, ಅರಿಶಿಣ, ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಉಪ್ಪು, ಸಕ್ಕರೆ, ಚಹಾ ಇತ್ಯಾದಿ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ ನೀಡಲಾಯಿತು.