ಚಿತ್ರದುರ್ಗ: ಇದು ಈ ಭಾಗದ ಜನರ ಆರಾಧ್ಯ ದೈವ. ಪವಾಡಗಳಿಂದಲೇ ವಿಶ್ವವಿಖ್ಯಾತಿ ಪಡೆದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಅದೇಷ್ಟೋ ಭಕ್ತರು ಮಾಡಿಕೊಂಡಿದ್ದ ಹರಕೆಗಳನ್ನು ಶ್ರದ್ಧಾ ಭಕ್ತಿಯಿಂದ ಸಲ್ಲಿಸುವ ಮೂಲಕ ಭಕ್ತಿಯ ಪರಕಾಷ್ಟೆ ಮೆರೆದರು. ಇನ್ನು ಸ್ವಾಮಿಯ ತೇರು ಕೂಡ ಯಾವುದೆ ಅಡೆ ತಡೆಗಳಿಲ್ಲದೆ ಸುಗಮಾಗಿ ಸಾಗಿದ್ದು, ದೂರದ ಊರುಗಳಿಂದ ಆಗಮಿಸಿದ್ದ ಭಕ್ತ ಸಮೂಹ ತೇರನ್ನು ಎಳೆಯುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ರಥೋತ್ಸವ ಭಕ್ತ ಸಮೂಹದ ನಡುವೆ ಅದ್ಧೂರಿಯಾಗಿ ನೆರವೇರಿತು. 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಬಸವ ಕಲ್ಯಾಣದಿಂದ ಹೊರಟ ಶರಣರಲ್ಲಿ ಗುರು ತಿಪ್ಪೇರುದ್ರಸ್ವಾಮಿಯೂ ಒಬ್ಬರು. ರುದ್ರದೇವನೆಂಬ ನಾಮಾಂಕಿತದೊಂದಿಗೆ ಈಗಿನ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಗೆ ಬಂದು ನೆಲೆಸಿದ ಈ ಪವಾಡ ಪುರುಷರು, ಈ ಹಿಂದೆ ಬಂಗಾರದ ಬಾನುಕೋಟೆ ಎಂಬ ಹೆಸರಿನಲ್ಲಿದ್ದ ನಾಯಕನಹಟ್ಟಿ ತಿಪ್ಪೆಗಳಿಂದ ಕೂಡಿದ ಊರಾಗಿದ್ದರಿಂದ ಇಲ್ಲಿ ನೆಲೆಸಿ ಜನರ ಅಂಧಕಾರ, ಅಜ್ಞಾನಗಳನ್ನು ತೊಲಗಿಸಿ, ಸನ್ಮಾರ್ಗಗಳನ್ನು ತೋರಿಸಿದ್ದರು.
ಇಲ್ಲಿಯೇ ಜೀವಂತ ಸಮಾಧಿಯಾಗುವ ಮುನ್ನವೇ ಈ ಗ್ರಾಮದಲ್ಲಿ ಸಾಕಷ್ಟು ಪವಾಡಗಳನ್ನುಸೃಷ್ಠಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಭಕ್ತರು ಇಂದಿಗೂ ಕೂಡ ಸಾಕಷ್ಟು ಹರಕೆಗಳನ್ನು ಕಟ್ಟಿಕೊಳ್ಳುವ ಮೂಲಕ ಇಷ್ಟಾ ರ್ಥಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಗುರುಗಳು ಜೀವಂತ ಸಮಾಧಿಯಾದ ಪಾಲ್ಗುಣ ಬಹುಳ ಚಿತ್ತಾ ನಕ್ಷತ್ರದ ದಿನದಂದು ಪ್ರತೀವರ್ಷ ಭ್ರಹ್ಮರಥೋತ್ಸವ ನಡೆದುಕೊಂಡು ಬಂದಿದೆ.