ETV Bharat / state

ಮನೆ ಬಿಟ್ಟು ಬಂದ ಜೋಡಿಹಕ್ಕಿಗೆ ಮದುವೆ ಮಾಡಿಸಿದ ಗ್ರಾಮಸ್ಥರು!

author img

By

Published : Feb 27, 2020, 11:29 PM IST

ಪೋಷಕರ ವಿರೋಧದ ನಡುವೆಯೂ ಮನೆ ಬಿಟ್ಟು ಬಂದ ಜೋಡಿಹಕ್ಕಿಗೆ ಬೇರೊಂದು ಗ್ರಾಮದ ಜನರೆಲ್ಲಾ ಸೇರಿ ಮದುವೆ ಮಾಡಿಸಿ ಶುಭ ಹಾರೈಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದುರ್ಗಾವರ ಎಂಬ ಗ್ರಾಮದಲ್ಲಿ ನಡೆದಿದೆ.

The villagers who married the couple in chitradurga
ಮನೆ ಬಿಟ್ಟು ಬಂದ ಜೋಡಿಹಕ್ಕಿಗೆ ಮದುವೆ ಮಾಡಿಸಿದ ಗ್ರಾಮಸ್ಥರು

ಚಿತ್ರದುರ್ಗ: ಪೋಷಕರ ವಿರೋಧದ ನಡುವೆಯೂ ಮನೆ ಬಿಟ್ಟು ಬಂದ ಜೋಡಿಹಕ್ಕಿಗೆ ಬೇರೊಂದು ಗ್ರಾಮದ ಜನರೆಲ್ಲಾ ಸೇರಿ ಮದುವೆ ಮಾಡಿಸಿ ಶುಭ ಹಾರೈಸಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದುರ್ಗಾವರ ಎಂಬ ಗ್ರಾಮದಲ್ಲಿ ನಡೆದಿದೆ.

ಈ ಪ್ರೇಮಿಗಳು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ. ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ನಂದಿನಿ ಹಾಗೂ ಪದವಿ ಮುಗಿಸಿ ಜೀವನೋಪಾಯಕ್ಕಾಗಿ ಫೈನಾನ್ಸ್ ನಡೆಸುತ್ತಿರೋ ಸಂದೀಪ್​ಗೆ ಕೆಲವು ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿತ್ತು. ಜಾತಿಯನ್ನು ಮೀರಿ ಆರು ವರ್ಷದ ಪ್ರೀತಿಯನ್ನು ವಿರೋಧದ ನಡುವೆಯೂ ಪಡೆದುಕೊಂಡಿದ್ದಾರೆ. ಪರಸ್ಪರ ಮನಸಾರೆ ಪ್ರೀತಿಸುತ್ತಿರುವ ಈ ಜೋಡಿಹಕ್ಕಿಗೆ ಯುವತಿಯ ಮನೆಯವರಿಂದ ವಿರೋಧ ಎದುರಾಗಿದ್ದ ಬೆನ್ನಲ್ಲೇ ಊರು ಬಿಟ್ಟು ದುರ್ಗಾವರ ಗ್ರಾಮಕ್ಕೆ ಆಗಮಿಸಿದ್ದರಂತೆ. ಇದೀಗ ಸಂಬಂಧಿಕರು ಹಾಗೂ ಬೇರೆ ಗ್ರಾಮಸ್ಥರ ನೇತೃತ್ವದಲ್ಲಿ ಸಪ್ತಪದಿ ತುಳಿಯುವ ಮೂಲಕ ನವಜೀವನಕ್ಕೆ ಕಾಲಿರಿಸಿದ್ದಾರೆ.

ಪ್ರೇಮಿಗಳು ನಮಗೆ ಮದುವೆ ಮಾಡಿಸಿ ಎಂದು ಕೇಳಿಕೊಂಡ ಹಿನ್ನೆಲೆ ದುರ್ಗಾವರ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸ್ಥಳೀಯರು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ, ಶುಭ ಹಾರೈಸಿ ಆಶೀರ್ವಾದ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.