ಚಿತ್ರದುರ್ಗ: ಫೋಟೋ ಸ್ಟುಡಿಯೋ ಮಾಲೀಕರೊಬ್ಬರ ಭೀಕರ ಕೊಲೆ ಹೊಳಲ್ಕೆರೆ ತಾಲೂಕಿನ ಶಿವಗಂಗ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಸವರಾಜ್ (33) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಇವರು ತನ್ನದೇ ಸ್ವಂತ ಸ್ಟುಡಿಯೋ & ವಿಡಿಯೋ ಶಾಪ್ ನಡೆಸುತ್ತಿದ್ದರು.
ಸುಮಾರು 10 ವರ್ಷಗಳಿಂದ ತನ್ನ ಸ್ವಂತ ಗ್ರಾಮ ಶಿವಗಂಗಾದಲ್ಲೇ ವಾಸವಾಗಿದ್ದ ಬಸವರಾಜ್ಗೆ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದು, ಇತ್ತೀಚೆಗಷ್ಟೆ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಇದರಿಂದಾಗಿ ತವರು ಮನೆಗೆ ತೆರಳಿದ್ದು. ಬಸವರಾಜ ಮನೆಯಲ್ಲಿ ಒಬ್ಬರೆ ಇದ್ದದ್ದನ್ನು ಗಮನಿರುವ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊಲೆ ಪ್ರಕರಣಕ್ಕೆ ಇಡೀ ಶಿವಗಂಗಾ ಗ್ರಾಮವೇ ಬೆಚ್ಚಿ ಬಿದಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆ ಮಾಡಿರೋ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ನೀಡಿ ಎಂದು ಮೃತನ ಸಹೋದರ ಸಿದ್ದೇಶ್ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಕೆ ಪರುಶುರಾಮ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.
ಇದನ್ನೂ ಓದಿ:ಕುಡಿಬೇಡ ಎಂದಿದ್ದಕ್ಕೆ ಗರ್ಭಿಣಿ ಪತ್ನಿಯ ಬೈಕ್ಗೆ ಕಟ್ಟಿ ಧರಧರನೇ ಎಳೆದೊಯ್ದ ಕುಡುಕ ಪತಿ!