ETV Bharat / state

ಸದ್ದಿಲ್ಲದೆ ಗುಬ್ಬಚ್ಚಿಗಳ ಪೋಷಣೆ ಮಾಡುತ್ತಿದೆ ಗುಬ್ಬಚ್ಚಿ ಟ್ರಸ್ಟ್ ! - ಪ್ರಾಣಿ

ಗುಬ್ಬಚ್ಚಿ ಟ್ರಸ್ಟ್ ಎಂಬ ಸಂಸ್ಥೆಯ ಕಾರ್ಯಕರ್ತರು ಪಕ್ಷಿಗಳ ರಕ್ಷಣೆ ಮುಂದಾಗಿದ್ದು, ಪ್ರತೀ ಮನೆಗಳ ಮುಂದೆ ಗೂಡುಗಳನ್ನು ಕಟ್ಟಿ ನೀರು ಹಾಕುವ ಮೂಲಕ ಜನರಲ್ಲಿ ಪಕ್ಷಿಗಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಗುಬ್ಬಚ್ಚಿ ಟ್ರಸ್ಟ್ ಕಾರ್ಯಕರ್ತರಿಂದ ಪಕ್ಷಿಗಳ ರಕ್ಷಣೆ
author img

By

Published : Mar 23, 2019, 3:38 AM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಬೇಸಿಗೆಕಾಲ ಪ್ರಾರಂಭವಾಗಿದ್ದು ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಆಹಾರ,ನೀರಿಲ್ಲದೆ ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಅಂತದ್ರಲ್ಲಿ ಪಕ್ಷಿಗಳ ಪೋಷಣೆಗೆಂದೇ ಇಲ್ಲೊಂದು ಟ್ರಸ್ಟ್ ಹುಟ್ಟಿಕೊಂಡಿದ್ದು ಅವುಗಳ ರಕ್ಷಣೆಗೆ ಮುಂದಾಗಿದೆ.

ಗುಬ್ಬಚ್ಚಿ ಟ್ರಸ್ಟ್ ಕಾರ್ಯಕರ್ತರಿಂದ ಪಕ್ಷಿಗಳ ರಕ್ಷಣೆ

ಗುಬ್ಬಚ್ಚಿ ಟ್ರಸ್ಟ್ ಎಂಬ ಸಂಸ್ಥೆಯ ಕಾರ್ಯಕರ್ತರು ಪಕ್ಷಿಗಳ ರಕ್ಷಣೆ ಮುಂದಾಗಿದ್ದಾರೆ. ನಗರದ ಕೂಗಳತೆಯ ದೂರದಲ್ಲಿರುವ ಜೋಗಿ ಮಟ್ಟಿ ವನ್ಯ ಧಾಮದಲ್ಲಿ ಕುಡಿಯಲು ಹನಿ ನೀರು ಸಿಗದೆ ಆಗಮಿಸುವ ಮೂಕ ಪ್ರಾಣಿಗಳ ವೇದನೆಯನ್ನು ಅರ್ಥ ಮಾಡಿಕೊಂಡ ಕಾರ್ಯಕರ್ತರು ಪ್ರತೀ ಮನೆಗಳ ಮುಂದೆ ಗೂಡುಗಳನ್ನು ಕಟ್ಟಿ ನೀರು ಹಾಕುವ ಮೂಲಕ ಜನರಲ್ಲಿ ಪಕ್ಷಿಗಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕೃತಕ ಗೂಡುಗಳನ್ನು ತಯಾರಿಸುವ ಮೂಲಕ ಪ್ರತಿ ಮನೆ ಮನೆಗೆ ವಿತರಣೆ ಮಾಡಿ ಗುಬ್ಬಚ್ಚಿಗಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಅರಣ್ಯ ಇಲಾಖೆ ಕೂಡ ಕೈಜೋಡಿಸುವ ಮೂಲಕ ಸುಮಾರು 200 ಕ್ಕೂ ಹೆಚ್ಚು ಗೂಡುಗಳನ್ನು ನೀಡಿ ಪಕ್ಷಿಗಳ ರಕ್ಷಣೆಗೆ ಮುಂದಾಗುತ್ತಿದೆ. ಈ ಕೃತಕ ಗೂಡುಗಳನ್ನು ತಯಾರಿಸಲು ಟ್ರಸ್ಟ್ ನ ಪದಧಿಕಾರಿಗಳು ತಮ್ಮ ಸ್ವಂತ ಹಣವನ್ನು ವ್ಯಯ ಮಾಡುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರತೀ ವರ್ಷ ಗುಬ್ಬಚ್ಚಿ ಟ್ರಸ್ಟ್ ವತಿಯಿಂದ ವಿವಿಧ ಕೆಲಸಗಳನ್ನ ಮಾಡುವ ಇವರು, ಈ ಬಾರಿಯೂ ಈ ರೀತಿಯ ವಿನೂತನ ಪ್ರಯೋಗ ಮಾಡಿದ್ದು ಇದರಿಂದ ಮೂಕ ಪ್ರಾಣಿ, ಪಕ್ಷಿಗಳ ಸಮಸ್ಯೆಗೆ ಸ್ಪಂಧಿಸಿದ್ದಾರೆ, ರೀತಿಯ ಉತ್ತಮ ಕಾರ್ಯಗಳನ್ನ ಮಾಡೋದ್ರಿಂದ ಸಾರ್ವಜನಿಕರಲ್ಲಿಯೂ ಜಾಗೃತಿಯನ್ನು ಮೂಡಿಸಿದಂತಾಗುತ್ತಿದ್ದು ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.

Intro:ಚಿತ್ರದುರ್ಗದಲ್ಲಿ ಹುಟ್ಟುಕೊಂಡಿದೆ ಗುಬ್ಬಚ್ಚಿ ಟ್ರಸ್ಟ್ : ಇಲ್ಲಿ ಸದ್ದಿಲ್ಲದೆ ಆಗ್ತಾ ಇದೇ ಗುಬ್ಬಚ್ಚಿಗಳ ಪೋಷಣೆ

ವಿಶೇಷ ವರದಿ....

ಚಿತ್ರದುರ್ಗ :- ಅ ಜಿಲ್ಲೆಯಲ್ಲಿ ಭೀಕರ ಕ್ಷಾಮ ತಲೆದೊರಿದ್ದರಿಂಧ ವನ್ಯ ಧಾಮದಲ್ಲಿರುವ ಪಕ್ಷಿಗಳು ನೀರಿಗಾಗಿ ಪರಿತಾಪಿಸುವಂತಾಗಿದೆ. ಆಹಾರ ನೀರಿಲ್ಲದೆ ಮೂಕ ಪ್ರಾಣಿಗಳು ಸಾವಿನ ಕದ ತಟ್ಟಿವೆ. ಅಂತದ್ರಲ್ಲಿ ಪಕ್ಷಿಗಳ ಪೋಷಣೆಗೆಂದೇ ಇಲ್ಲೊಂದು ಟ್ರಸ್ಟ್ ಹುಟ್ಟಿಕೊಂಡಿದೆ. ಮೂಕ ಪ್ರಾಣಿ, ಪಕ್ಷಿಗಳು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಟ್ರಸ್ಟ್ ನ ಪದಾಧಿಕಾರಿಗಳು ಮನೆ ಮನೆಗೆ ತೆರಳಿ ಗೂಡು, ಹಕ್ಕಿಗಳಿಗೆ ಆಹಾರ, ಸೇರಿದ್ದಂತೆ ಕುಡಿಯಲು ನೀರು ಇಡುವಂತೆ ಮನೆ ಮಾಲೀಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆಹಾರ ಹರಸಿ ಬರುವ ಹಕ್ಕಿಗಳ ಪೋಷಣೆ ಸದ್ದಿಲ್ಲದೆ ಮಾಡಲಾಗುತ್ತಿದೆ.

ಹೌದು ಕೋಟೆನಾಡಿನಲ್ಲಿ ಮೂಕ ಪ್ರಾಣಿಗಳ ಪೋಷಣೆ ಸದ್ದಿಲ್ಲದೆ ನಡೆಯುತ್ತಿದೆ. ಮನೆ ಮನೆಗೆ ತೆರಳಿ ಕೃತಕ ಗೂಡುಗಳನ್ನು ಕಟ್ಟುವ ಮೂಲಕ ಗುಬ್ಬಚ್ಚಿ ಟ್ರಸ್ಟ್ ನ ಕಾರ್ಯಕರ್ತರು ಉತ್ತಮ ಕಾರ್ಯಯದಲ್ಲಿ ತೊಡಗಿಕೊಂಡಿದ್ದಾರೆ. ನಗರದ ಕೂಗಳತೆಯ ದೂರದಲ್ಲಿರುವ ಜೋಗಿ ಮಟ್ಟಿ ವನ್ಯ ಧಾಮದಲ್ಲಿ ಕುಡಿಯಲು ಹನಿ ನೀರು ಸಿಗದೆ ಆಗಮಿಸುವ ಮೂಕ ಪ್ರಾಣಿಗಳ ವೇದನೆಯನ್ನು ಅರ್ಥ ಮಾಡಿಕೊಂಡ ಕಾರ್ಯಕರ್ತರು ಪ್ರತೀ ಮನೆಗಳ ಮುಂದೆ ಗೂಡುಗಳನ್ನು ಕಟ್ಟಿ ನೀರು ಹಾಕುವ ಮೂಲಕ ಜನ್ರಲ್ಲಿ ಪಕ್ಷಿಗಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಕೃತಕ ಗೂಡುಗಳನ್ನು ತಯಾರಿಸುವ ಮೂಲಕ ಪ್ರತಿ ಮನೆ ಮನೆಗೆ ವಿತರಣೆ ಮಾಡಿ ಗುಬ್ಬಚ್ಚಿಗಳ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಅರಣ್ಯ ಇಲಾಖೆ ಕೂಡ ಕೈಜೋಡಿಸುವ ಮೂಲಕ ಸುಮಾರು 200 ಕ್ಕೂ ಹೆಚ್ಚು ಗೂಡುಗಳನ್ನು ನೀಡುಯವ ಪಕ್ಷಿಗಳ ರಕ್ಷಣೆಗೆ ಮುಂದಾಗುತ್ತಿದೆ. ಇನ್ನೂ ಈ ಕೃತಕ ಗೂಡುಗಳನ್ನು ತಯಾರಿಸಲು ಟ್ರಸ್ಟ್ ನ ಪದಧಿಕಾರಿಗಳು ತಮ್ಮ ಸ್ವಂತ ಹಣವನ್ನು ವ್ಯಯ ಮಾಡುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಸುಮಾರು ವರ್ಷಗಳಿಂದ ಪಕ್ಷಿಗಳ ರಕ್ಷಣೆಗೆ ಪಣ ತೊಟ್ಟಿರುವ ಗುಬ್ಬಚ್ಚಿ ಟ್ರಸ್ಟ್ ಹಕ್ಕಿಗಳಿಗೆ ಉಪಕಾರಿಯಾಗಿದೆ. ಪ್ರತೀ ವರ್ಷ ಗುಬ್ಬಚ್ಚಿ ಟ್ರಸ್ಟ್ ವತಿಯಿಂದ ವಿಧ ವಿಧವಾದ ಕೆಲಸಗಳನ್ನ ಮಾಡುವ ಇವರು, ಈ ಬಾರಿಯೂ ಈ ರೀತಿಯ ವಿನೂತನ ಪ್ರಯೋಗ ಮಾಡೋದ್ರಿಂದ ಮೂಕ ಪ್ರಾಣಿ,ಪಕ್ಷಿಗಳ ಸಮಸ್ಯೆಗೆ ಸ್ಪಂಧಿಸಿದಂತಾಗುತ್ತೆ ಎಂದು ಭಾವನೆ ಜನ್ರಲ್ಲಿ ಮೂಡಿಸುತ್ತಿದ್ದಾರೆ.

ಬೈಟ್01:- ಕಾರ್ತೀಕ್, ಟ್ರಸ್ಟ್ ಪದಧಿಕಾರಿ
ಈ ರೀತಿಯ ಉತ್ತಮ ಕಾರ್ಯಗಳನ್ನ ಮಾಡೋದ್ರಿಂದ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದಂತಾಗುತ್ತಿದ್ದು ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಇನ್ನೂ ಮೂಕ ಪ್ರಾಣಿ, ಪಕ್ಷಿಗಳ ಸಮಸ್ಯೆಗೆ ಅನೇಕ ಬಾರಿ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು ಉದಾಹರಣೆ ಇದೆ. ಇದ್ರಿಂದ ಪ್ರತಿಯೊಬ್ಬರು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೊದ್ರಿಂದ ಮೂಕ ಪ್ರಾಣಿ ಸಂಕುಲ ಶಾಶ್ವತವಾಗಿ ಇರಲು ಸಹಕಾರಿಯಾಗುತ್ತದೆ ಎಂಬುದು ಟ್ರಸ್ಟ್ ಪದಾಧಿಕಾರಿ ಕಾರ್ತೀಕ್ ರವರ ಆಶೆಯವಾಗಿದೆ.

ಬೈಟ್02:- ವಿದ್ಯಾ, ಜಾಗೃತಿ ಮೂಡಿಸುತ್ತಿರುವವರು

ಒಟ್ಟಾರೆಯಾಗಿ ಗುಬ್ಬಚ್ಚಿ ಟ್ರಸ್ಟ್ ನವರು ಮಾಡ್ತಿರೋ ಕೆಲಸ ಜಿಲ್ಲೆಯಾದಂತ್ಯ ಪ್ರಶಂಸೆಗೆ ಪಾತ್ರವಾಗಿದ್ದು, ಈ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕಾಗಿದೆ. ಮನುಷ್ಯನಂತೆಯೇ ಮೂಕ ಪ್ರಾಣಿಗಳಿಗೂ ಆದ್ಯತೆಯನ್ನು ನೀಡಬೇಕು ಎನ್ನುವುದೇ ಇವರ ಉದ್ದೇಶವಾಗಿದ್ದು, ಪ್ರತಿಯೊಬ್ಬರು ಈ ರೀತಿ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಪಕ್ಷಿ ಸಂಕುಲಗಳು ಉಳಿಯುವುದಂತು ಸತ್ಯ.
         
ಡಿ ನೂರುಲ್ಲಾ ಈಟಿವಿ ಭಾರತ್, ಚಿತ್ರದುರ್ಗ..
Body:gubacchiConclusion:gumpu
ETV Bharat Logo

Copyright © 2024 Ushodaya Enterprises Pvt. Ltd., All Rights Reserved.