ಚಿತ್ರದುರ್ಗ: ಹಿರಿಯೂರು ಸಮೀಪದ ವಾಣಿ ವಿಲಾಸ ಸಾಗರ ಭರ್ತಿಯಾಗಿ ಕೋಡಿ ಬೀಳುವ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಚಳ್ಳಕೆರೆಯ ದೊಡ್ಡೇರಿ ಸದ್ಗುರು ಸತ್ ಉಪಾಸಿ ಅವರು ಭಕ್ತರೊಂದಿಗೆ ಆಗಮಿಸಿ ಪೂಜಾ ಕಾರ್ಯ ನೆರವೇರಿಸಿದರು.
2019ರಲ್ಲಿ ವಾಣಿ ವಿಲಾಸ ಸಾಗರ ಡ್ಯಾಂನಲ್ಲಿ ನೀರು ಸಂಪೂರ್ಣ ತಳಮಟ್ಟಕ್ಕೆ ಇಳಿದಿತ್ತು. ಅಂದು 62 ಅಡಿ ನೀರು ಸಂಗ್ರಹವಿದ್ದ ಸಂದರ್ಭದಲ್ಲಿ ಕನ್ನೇಶ್ವರ ಸತ್ ಉಪಾಸಿ ಸ್ವಾಮೀಜಿ ಬಾಗಿನ ಅರ್ಪಿಸಿ ಮುಂಬರುವ ದಿನಗಳಲ್ಲಿ ಡ್ಯಾಂಗೆ ಹೆಚ್ಚಿನ ನೀರು ಹರಿದು ಬಂದು ಭರ್ತಿಯಾಗಲಿದೆ ಎಂದು ಹೇಳಿದ್ದರು. ಇಂದು ಅವರು ಮಾತು ನಿಜ ಎನಿಸಿದ್ದು, ಡ್ಯಾಂಗೆ 125 ಅಡಿ ನೀರು ಹರಿದು ಬಂದಿದೆ. ಗಂಗಾಪೂಜೆ ನೇರವೇರಿಸಿದ ನಂತರ ಶ್ರೀಗಳು ಭವಿಷ್ಯದಲ್ಲಿ ಜಲಾಶಯಕ್ಕೆ ಭರಪೂರ ನೀರು ಹರಿದು ಬರಲಿದೆ ಎಂದು ಭವಿಷ್ಯ ನುಡಿದರು.
ವಾಣಿ ವಿಲಾಸ ಸಾಗರ 1933ರಲ್ಲಿ ಒಮ್ಮೆ ಭರ್ತಿಯಾಗಿ ಕೋಡಿ ಹರಿದಿತ್ತು. ಇದೀಗ ಮತ್ತೆ ಭರ್ತಿಯಾಗಿದ್ದು, ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ತಂದಿದೆ. ಮತ್ತೊಂದೆಡೆ, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಇದನ್ನೂ ಓದಿ: ಕಾರವಾರದಲ್ಲಿ ಲಾರಿ ಹಿಂಬದಿಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
ಈ ಸಂದರ್ಭದಲ್ಲಿ ಗುರುಮಾತೆ ಯಲ್ಲಮ್ಮ, ತುಮಕೂರಿನ ತನ್ಮಯಾನಂದ ಸ್ವಾಮೀಜಿ, ಬೆಸ್ಕಾಂ ಎಇಇ ತಮ್ಮರಾಯ, ಡಾ.ರಾಜು ಸೇರಿದಂತೆ ಭಕ್ತರು ಭಾಗವಹಿಸಿದ್ದರು.