ಚಿತ್ರದುರ್ಗ: ಸದಾ ಮೌಢ್ಯತೆಗೆ ಸೆಡ್ಡು ಹೊಡೆಯುತ್ತಲೇ ಬರುತ್ತಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಇಂದು ಗ್ರಹಣದ ಸಮಯದಲ್ಲೇ ಮಠದ ಆವರಣದಲ್ಲಿ ಅಡುಗೆ ತಯಾರಿಸಿ ನೆರೆದಿದ್ದ ಜನರ ಜೊತೆ ಸಹ ಪಂಕ್ತಿ ಭೋಜನ ಸವಿಯುವ ಮೂಲಕ ಮತ್ತೊಮ್ಮೆ ಮೌಢ್ಯತೆಗೆ ಸೆಡ್ಡು ಹೊಡೆದರು.
ಗ್ರಹಣ ಎನ್ನುವುದು ಪ್ರಕೃತಿಯ ವಿಸ್ಮಯಕಾರಿ ಪ್ರಕ್ರಿಯೆ ಎಂದು ಅರಿತ ಅವರು ಜನಸಾಮಾನ್ಯರೊಂದಿಗೆ ಕೂತು ಸಹಪಂಕ್ತಿ ಭೋಜನ ಸೇವಿಸಿದರು. ಮೌಢ್ಯತೆಯನ್ನು ತೊಡೆದು ಹಾಕುವಲ್ಲಿ ವಿಫಲವಾಗಿರುವ ಜನರಿಗೆ ಅರಿವನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಜನರು ಇದನ್ನು ದೂರ ಮಾಡ್ಬೇಕು ಎಂದರು.
ಇನ್ನು ಗ್ರಹಣದ ಬಗ್ಗೆ ತಪ್ಪಾಗಿ ತಿಳಿದುಕೊಂಡು ಮನೆಯಲ್ಲೇ ಕುಳಿತುಕೊಳ್ಳುವ ಬದಲು ಮನೆಯಿಂದ ಹೊರಬಂದು ಅಪರೂಪಕ್ಕೆ ಒಮ್ಮೆ ನಡೆಯುವ ಈ ರೀತಿಯ ವಿಸ್ಮಯಕಾರಿ ಸಂದರ್ಭವನ್ನು ಹಬ್ಬದಂತೆ ಆಚರಿಸಿ ಎಂದು ಶರಣರು ಕರೆ ನೀಡಿದರು.