ಚಿತ್ರದುರ್ಗ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೇಸ್ನಿಂದ ಮುಕ್ತರಾದರೆ ಮಂತ್ರಿ ಆಗ್ತಾರೆ, ಅದರಲ್ಲಿ ಯಾವುದೇ ಅನುಮಾವಿಲ್ಲ. ರಮೇಶ್ ಜಾರಕಿಹೊಳಿ ಕೇಸ್ ತನಿಖೆಯಲ್ಲಿದ್ದು, ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಚಿತ್ರದುರ್ಗ ನಗರದಲ್ಲಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಸಿಎಂ ಅಭ್ಯರ್ಥಿ ಬಗೆಗಿನ ಕಚ್ಚಾಟದ ವಿಚಾರ ಬಗ್ಗೆ ಮಾತಾನಾಡಿದ ಅವರು, ಪಕ್ಷ ಗೆದ್ದು ಬಂದರೆ ಸಿಎಂ ಆಗೋದು, ಇಲ್ಲದಿದ್ದರೆ ಹೇಗೆ ಸಿಎಂ ಆಗ್ತಾರೆಂದು ಕಾಂಗ್ರೆಸ್ ನಾಯಕರನ್ನು ಅವರು ವ್ಯಂಗ್ಯ ಮಾಡಿದರು.
ಕಳೆದ ಸಲ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಯಾರಿಗೆ ಗೊತ್ತಿತ್ತು? ರಾಜಕಾರಣ ಹೇಗೆ ತಿರುಗುತ್ತದೆ ಯಾರಿಗೆ ಗೊತ್ತು? ಒಂದು ರೀತಿಯಲ್ಲಿ ಇದು ಚಕ್ರ ಎಂದರು. ಕೋವಿಡ್-19 ಡೆತ್ ರಿಪೋರ್ಟ್ ಮರೆ ಮಾಚುವ ಸ್ಥಿತಿ ಬಂದಿಲ್ಲ. ಕೋಮಾರ್ಬಿಡ್ ಡೆತ್, ಕ್ರಾನಿಕ್ ಡಿಸೀಸ್ ಡೆತ್ ಆಗ್ತಿವೆ. ಅಕಾಸ್ಮಾತ್ ರಿಪೋರ್ಟ್ ಆಗದೆ ಸಾವಿಗೀಡಾಗಿದ್ದಾರೆ, ನಾವೇನು ಮಾಡೋಕಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದರು.
ಕೊರೊನಾ 3ನೇ ಅಲೆ, ಡೆಲ್ಟಾ ಪ್ಲಸ್ ಬಗ್ಗೆ ಪರಿಶೀಲಿಸಿ ವಿದ್ಯಾಗಮ ಸಾಧ್ಯತೆ : ಇನ್ನೊಂದು ತಿಂಗಳು ಕಾದು ನೋಡಿ ವಿದ್ಯಾಗಮ ಬಗ್ಗೆ ತೀರ್ಮಾನ ಮಾಡಲಾಗುವುದು. ಕಳೆದ ಸಲ ವಿದ್ಯಾಗಮ ವೇಳೆ ಶಿಕ್ಷಕರ ಸಾವು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಾವಿಗೆ ಬೇಕಾದಷ್ಟು ಕಾರಣ ಇರುತ್ತವೆ, ಡೆತ್ ಆಡಿಟ್ನಿಂದ ಗೊತ್ತಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾಗಮ ಮಾಡಿದ್ರೆ ತೊಂದರೆ ಇಲ್ಲ, ಸಾವಿಗೆ ಅದೊಂದೇ ಕಾರಣ ಎಂಬ ಪ್ರಚಾರ ಬೇಡ. ಎಲ್ಲರೂ ಜಾಗೃತರಾಗುವುದು ಒಳ್ಳೆಯದು ಎಂದರು.