ಚಿತ್ರದುರ್ಗ: ಎರಡು ದಿನದ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಚಳ್ಳಕೆರೆ ತಾಲೂಕಿನ ಚಿಕ್ಕ ಮದುರೆ ಕೆರೆ ಕೋಡಿ ಬಿದ್ದಿದೆ.
ಜಿಲ್ಲಾದ್ಯಂತ ಸುರಿದ 101.6 ಮಿ.ಮೀ. ಮಳೆಗೆ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿದೆ. ಇದರಿಂದ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ರೈತರು ಕೂಡ ಉತ್ತಮ ಬೆಳೆ ಬೆಳೆಯುವ ಲೆಕ್ಕಚಾರದಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲೆಯ ಹಲವು ಕೆರೆಗಳು ಮಳೆಗೆ ಭರ್ತಿಯಾಗಿ ಕೋಡಿ ಬಿದ್ದಿವೆ.
ಓದಿ:ಅಕಾಲಿಕ ಮಳೆ : ಕೊಚ್ಚಿ ಹೋದ ಮೆಕ್ಕೆಜೋಳ ಬೆಳೆ
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಬತ್ತಿ ನಿಂತ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದ್ದು, ರೈತರ ಮೊಗದಲ್ಲಿ ಸಂತೋಷ ಮೂಡಿದೆ.