ಚಿತ್ರದುರ್ಗ: ನಿನ್ನೆ ತಡರಾತ್ರಿ ಸುರಿದ ಮಳೆಯಿಂದ ನಗರದ ತುರುವನೂರು ರಸ್ತೆಯ ಸೇತುವೆ ಬಳಿ ಹೆಚ್ಚು ಮಳೆ ನೀರು ವೇಗವಾಗಿ ಹರಿಯುತ್ತಿರುವ ಪರಿಣಾಮ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ರಸ್ತೆ ದಾಟಲು ಪರದಾಟ ನಡೆಸುವಂತಾಗಿದೆ.
ನೀರು ವೇಗವಾಗಿ ಹರಿಯುತ್ತಿರುವ ಪರಿಣಾಮ ಸೇತುವೆ ರಸ್ತೆ ಮೂಲಕ ಬಂದ ಓಮಿನಿ ವಾಹನ ಮುಂದಕ್ಕೆ ಸಾಗದೇ ನಿಂತಲ್ಲೇ ಸಿಕ್ಕಿಹಾಕಿಕೊಂಡಿತ್ತು. ಬಳಿಕ ಸ್ಥಳದಲ್ಲಿದ್ದ ಜನರು ಓವಿನಿ ವಾಹನವನ್ನು ತಳ್ಳುವ ಮೂಲಕ ರಸ್ತೆ ದಾಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ಸೇವೆ: ಜ.14ರಂದು ಸಿಎಂ ಚಾಲನೆ
ನಗರದಲ್ಲಿ ಸ್ವಲ್ಪ ಮಳೆಯಾದ್ರೂ ಕೂಡ ಸೇತುವೆ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ. ಹೀಗಾಗಿ ಸಾರ್ವಜನಿಕರು ರಸ್ತೆ ದಾಟಲು ಪರದಾಟ ನಡೆಸುವ ವಾತಾವರಣ ನಿರ್ಮಾಣವಾಗಿದೆ.