ಚಿತ್ರದುರ್ಗ: ಹೋರಾಟಗಾರ ಹಾಗೂ ರಂಗಕರ್ಮಿ ಪ್ರಸನ್ನ ಅವರು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಆರ್ಥಿಕ ನೀತಿ ಸರಿಪಡಿಸುವಂತೆ ಆಗ್ರಹಿಸಿ ನಗರದ ಎಸ್ ಎನ್ ಸ್ಮಾರಕದ ಬಳಿ ಸಮಾವೇಶ ನಡೆಸಿದರು.
ಜಿಎಸ್ಟಿಯಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ದೂರ ಮಾಡಲು ಪವಿತ್ರ ಆರ್ಥಿಕತೆ ಸತ್ಯಾಗ್ರಹ ಮುಂದುವರಿಕೆ ಎಂಬ ಘೋಷ ವಾಕ್ಯದಲ್ಲಿಂದು ನಗರದ ಎಸ್ ಎನ್ ಸ್ಮಾರಕದ ಬಳಿ ಸಮಾವೇಶ ಮಾಡಿದರು.
ಜನಸಾಮಾನ್ಯರ ಮೇಲಾಗುತ್ತಿರುವ ತೆರಿಗೆ ಹೊರೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಕ್ಷಸೀಯ ನೀತಿಗಳಿಂದ ಆರ್ಥಿಕತೆ ಸೋಲುತ್ತಿದೆ. ಪರ್ಯಾಯವಾಗಿ ಪವಿತ್ರ ಆರ್ಥಿಕ ನೀತಿಯ ಜಾರಿ ಅಗತ್ಯವಿದೆ ಎಂಬ ವಿಷಯದಡಿ ಸಂವಾದ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಪ್ರಶ್ನೆಗಾರರರಿಗೆ ಹೋರಾಟಗಾರ ಪ್ರಸನ್ನ ಉತ್ತರ ನೀಡಿದರು.
ನಂತರ ಮಾತನಾಡಿದ ಪ್ರಸನ್ನ, ಈ ಹೋರಾಟ ಶೇ. 94% ರಷ್ಟು ದುಡಿಯುತ್ತಿರುವವರ ಪರವಾಗಿದೆ. ನಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಲ್ಲ. ಇದು ಗಾಂಧೀಜಿ ಮಾದರಿಯ ಸತ್ಯಾಗ್ರಹ. ಬಡವರ ಪರ ಉದ್ಯಮ ಶೀಲತೆಗಾಗಿ ನಾವು ಈ ಹೋರಾಟ ಮಾಡುತ್ತಿದ್ದೇವೆ ಎಂದರು. ಸಮಾವೇಶದಲ್ಲಿ ಸಾಣೇಹಳ್ಳಿ ಶ್ರೀ ಪಂಡಿತರಾಧ್ಯ ಶಿವಚಾರ್ಯ ಶ್ರೀ, ಮಾಜಿ ಸಂಸದ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.