ಚಿತ್ರದುರ್ಗ: ಕೋಟೆನಾಡು ಮೊದಲ ಹಂತದ ಮತದಾನ ಮುಕ್ತಾಯಾವಾಗಿದ್ದು, ಅಭ್ಯರ್ಥಿಗಳ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಅದ್ರೇ ಜಿಲ್ಲೆಯ ಮತದಾರರು ಕೈಗೆ ಸಿಗುವ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಕೋಟೆನಾಡಲ್ಲಿ ಲೋಕಸಮರದ ಮುಗಿದಿದ್ದು, ಕ್ಷೇತ್ರದ ಮತದಾರರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ,ಬಿಜೆಪಿಯಿಂದ ಎ .ನಾರಾಯಣ ಸ್ವಾಮಿ ಕಣಕ್ಕಿಳಿದಿದ್ದು, ಹಣೆ ಬರಹ ಮುಂದಿನ ತಿಂಗಳು 23ಕ್ಕೆ ತಿಳಿಯಲಿದೆ. ಲೋಕ ಸಮರದ ತೀರ್ಪು ಬರುವ ಮುನ್ನ ಕ್ಷೇತ್ರದ ಜನರು ಸೋಲು ಗೆಲುವಿನ ಬಗ್ಗೆ ಲೆಕ್ಕಚಾರ ಹಾಕುತ್ತಿದ್ದಾರೆ. ಕೆಲ ಜನಸಾಮಾನ್ಯರು ಸರಳ ಸಜ್ಜನಿಕೆಯ ಹಾಗೂ ಕೈ ಸಿಗುವ ಬಿಎನ್ ಚಂದ್ರಪ್ಪ ಅವರನ್ನು ಸಂಸದರಾಗಿ ಸ್ವೀಕರಿಸುತ್ತಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನೂ ಬಿಜೆಪಿ ಅಭ್ಯರ್ಥಿ ಎ .ನಾರಾಯಣಸ್ವಾಮಿಯವರಿಗೆ ಭೋವಿ ಸಮುದಾಯ ಸೇರಿದಂತೆ ಲಂಬಾಣಿ ತಳ ಸಮುದಾಯಗಳು ಕೂಡ ಕಂಟವಾಗಿವೆ. ನಾನು ಆನೇಕಲ್ ಗಂಡುಗಲಿ ಎಂದು ಸಾಕಷ್ಟು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ಕೂಡ ಎ. ನಾರಾಯಣಸ್ವಾಮಿಯವರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.
ಈ ಹೇಳಿಕೆ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದರಿಂದ ನಾರಾಯಣ ಸ್ವಾಮಿ ಗೆಲುವು ಸಾಧಿಸಿದ ಬಳಿಕ ನಮಗೆ ಸಿಗ್ತಾರ ಎಂಬ ಯಕ್ಷ ಪ್ರಶ್ನೆ ಮತದಾರರಲ್ಲಿ ಕಾಡುತ್ತಿದೆ.
ಇನ್ನು ಮೈತ್ರಿ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ಪರ ಸರಳ ವ್ಯಕ್ತಿಯ ಮಾತುಗಳು ಕೇಳಿ ಬರುತ್ತಿದ್ದು, ಸಂಸದರಾಗಿ ಆಯ್ಕೆ ಆಗಬೇಕೆಂಬುದು ಜಿಲ್ಲೆಯ ಜನರ ಒತ್ತಾಸೆಯಾಗಿದೆ. ಇದನ್ನು ಹೊರತುಪಡಿಸಿದರೆ ಚಂದ್ರಪ್ಪ ಇಲ್ಲಾ ನಾರಾಯಣ ಸ್ವಾಮಿ ಗೆಲುವು ಸಾಧಿಸುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿಕೊಂಡಿರುವ ಉದಾಹರಣೆಗಳು ಸಿಗುತ್ತವೆ.