ಚಿತ್ರದುರ್ಗ: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವಾಡುತ್ತಿದೆ. ಇಂತಹ ಸಂಧರ್ಭದಲ್ಲಿ ಮುಖ್ಯಮಂತ್ರಿ ಶಾಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಸರ್ಕಾರದ ಹಣ ಖರ್ಚಾಗುತ್ತಿದೆ. ಗ್ರಾಮ ವಾಸ್ತವ್ಯದಿಂದ ಏನೂ ಪ್ರಯೋಜನ ಇಲ್ಲ ಎಂದು ಶಾಸಕ ಶ್ರೀ ರಾಮುಲು ಸಿಎಂಗೆ ಟಾಂಗ್ ನೀಡಿದರು.
ಚಿತ್ರದುರ್ಗದಲ್ಲಿ ಕೆಡಿಪಿ ಸಭೆ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ರಾಜ್ಯದಲ್ಲಿ 25 ಕ್ಷೇತ್ರಗಳು ಬಿಜೆಪಿಯ ಪಾಲಾಗಿದ್ದರಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬೇಡ ಎಂದು ರಾಜ್ಯ ಸರ್ಕಾರ ಹೇಳಿದೆ. ಒಂದು ವೇಳೆ ಚುನಾವಣೆ ನಡೆದ್ರೆ ಬಿಜೆಪಿ 104 ಬದಲು 160 ಸ್ಥಾನಗಳನ್ನು ಪಡೆಯುತ್ತೇ. ಅದ್ದರಿಂದ ಅವರಿಗೇ ಅಸ್ತಿತ್ವ ಇಲ್ಲದ್ದಂತಾಗುತ್ತದೆ. ಅದಕ್ಕೆ ಚುನಾವಣೆ ಬೇಡಾ ಎನ್ನುತ್ತಿದ್ದಾರೆ ಎಂದು ಕುಟುಕಿದರು.
ಸಮ್ಮಿಶ್ರ ಸರ್ಕಾರದಲ್ಲಿ ಕಚ್ಚಾಟ ನಡೆಯುತ್ತಿದೆ. ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿದ್ದು, ಕೈದಳ ಪತಿಗಳ ನಡುವೆ ಕಚ್ಚಾಟ ಕೂಡ ನಡೆಯುತ್ತಿದೆ. ಜೆಡಿಎಸ್ನವರು ಚಿವುಟಿದರೆ ಕಾಂಗ್ರೆಸ್ನವರು ಅಳ್ತಾರೆ, ಅವರು ಚಿವುಟಿದರೆ ಕೈ ನಾಯಕರು ಅಳ್ತಾರೆ. ಹೀಗೆ ಪರಸ್ಪರ ಚಿವುಟಿಕೊಂಡು ತೊಟ್ಟಿಲು ತೂಗೋದು ಈ ಸರ್ಕಾರದ ಸಾಧನೆಯಾಗಿದೆ ಎಂದು ಮೊಳಕಾಲ್ಮೂರು ಶಾಸಕ ವ್ಯಂಗವಾಡಿದರು.
ಇನ್ನು ಬಳ್ಳಾರಿಗೂ, ಮೊಳಕಾಲ್ಮೂರು ಶಾಸಕ ರಾಮುಲುಗೂ ಏನ್ ಸಂಬಂಧ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಡಿಕೆ ಶಿವಕುಮಾರ್ರವರು ರಾಜ್ಯಕ್ಕೆ ದೊಡ್ಡ ಲೀಡರ್. ಅವರು ನನಗೆ ಕೇಳಿರುವ ಪ್ರಶ್ನೇ ತಮ್ಮ ನಾಯಕ ರಾಹುಲ್ ಗಾಂಧಿಯವರಿಗೆ ಕೇಳಬೇಕಾಗಿತ್ತು ಬದಲಿಗೆ ನನಗೆ ಕೇಳಿದ್ದಾರೆ. ರಾಹುಲ್ ಗಾಂಧಿ ಸೋಲಿನ ಭಯದಿಂದ ಅಮೇಠಿ ಬದಲು ವಯನಾಡಿನಲ್ಲಿ ನಿಂತು ಗೆದ್ದಿದ್ದಾರೆ.
ಡಿಕೆಶಿಯವರು ರಾಗಗೆ ಕೇಳಬೇಕು ವಯನಾಡಿಗೂ ನಿಮಗೂ ಏನ್ ಸಂಬಂಧ ಎಂದು ರಾಮುಲು ಡಿಕೆಶಿಯವರಿಗೆ ತಿರುಗೇಟು ನೀಡಿದರು.