ಚಿತ್ರದುರ್ಗ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ ಮುಂದುವರೆದಿದೆ.
ನಗರದ ಹೊರಪೇಟೆಯ ವಿವಿಧ ಮಸೀದಿಗಳ ಬಳಿ ಸಿಎಎ, ಎನ್ಆರ್ಸಿ, ಎನ್ ಪಿ ಆರ್, ಕಾಯ್ದೆಗಳ ವಿರುದ್ಧ ಅಲ್ಪಸಂಖ್ಯಾತರು ಮೌನ ಧರಣಿ ನಡೆಸಿದರು. ಮಧ್ಯಾಹ್ನದ ನಮಾಜು (ಪ್ರಾರ್ಥನೆ) ಸಲ್ಲಿಸಿದ ಬಳಿಕ ಮಸೀದಿ ಬಳಿ ಮೌನ ಪ್ರತಿಭಟನೆ ನಡೆಸಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಚಿತ್ರದುರ್ಗದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಕೆ. ಸರ್ದಾರ್ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಿಡಿದು ಘೋಷಣೆಗಳ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.