ETV Bharat / state

ಬಿಜೆಪಿ ಶಾಸಕರಲ್ಲಿ ಬೇಸರ, ಭಿನ್ನಮತ ಇರುವುದು ನಿಜ: ಶಾಸಕ ತಿಪ್ಪಾರೆಡ್ಡಿ - ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಬಿಜೆಪಿ ಪಕ್ಷದ ಶಾಸಕರಲ್ಲಿ ಬೇಸರ, ಭಿನ್ನಮತ ಇರುವುದು ನಿಜ. ಬಿಜೆಪಿ ಶಾಸಕರಿಗೆ ಸರ್ಕಾರದ ಸ್ಪಂದನೆ‌ ಇಲ್ಲ ಎಂಬ ಭಾವನೆ ಇದೆ ಎಂದು ಪಕ್ಷದ ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

MLA Thippareddy
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
author img

By

Published : May 29, 2020, 1:40 PM IST

ಚಿತ್ರದುರ್ಗ: ಪಕ್ಷದಲ್ಲಿ ಶಾಸಕರಲ್ಲಿ ಬೇಸರ, ಭಿನ್ನಮತ ಇರುವುದು ನಿಜ. ಬಿಜೆಪಿ ಶಾಸಕರಿಗೆ ಸರ್ಕಾರದ ಸ್ಪಂದನೆ‌ ಇಲ್ಲ ಎಂಬ ಭಾವನೆ ಇದ್ದು, ಮುಖ್ಯಮಂತ್ರಿಗಳು ಹಿರಿಯ ಶಾಸಕರನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಹಿರಿಯ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನೂ ಮೂರು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇವೆ ಎಂದು ಮನಸ್ಸಿಗೆ ಬಂದಂತೆ ಆಡಳಿತ ಮಾಡಲಾಗುತ್ತಿದೆ. ಅವರಿಗೆ ಬೇಕಾದವರಿಗೆ ಮಂತ್ರಿ ಮಂಡಲದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದೆ ಸ್ಥಾನಮಾನ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲವು ಸಮಾಜದ ಶಾಸಕರಿಗೆ ಸ್ಥಾನ ತಪ್ಪಿಸಿ ಎಷ್ಟು ದಿನ ಸರ್ಕಾರ ನಡೆಸಲು ಸಾಧ್ಯ? ಕೆಲವರು ಮೂರು ವರ್ಷ ಅಧಿಕಾರ ನಡೆಸಿ ಹೋಗಬಹುದು. ನಮ್ಮದು ಮುಗಿತು ಎನ್ನಬಹುದು ಎಂದು ಸಿಎಂ ಬಿಎಸ್​ವೈಗೆ ಶಾಸಕ ತಿಪ್ಪಾರೆಡ್ಡಿ ಪರೋಕ್ಷವಾಗಿ ಟಾಂಗ್ ನೀಡಿದರು.

ನಿನ್ನೆ ಉತ್ತರ ಕರ್ನಾಟಕದಲ್ಲಿ ಸಭೆ‌ ಸೇರಿದ ಶಾಸಕರು ನನ್ನ ಜತೆಯೂ ಮಾತಾಡಿದ್ದು, ಕೊರೊನಾ ಇರುವುದರಿಂದ ಕೆಲ‌ ಜನ ಮಾತ್ರ ಸೇರಿರಬಹುದು. ಶಾಸಕರ ಅಸಮಾಧಾನ ಗಮನಿಸಿ ಮೇಲ್ಮಟ್ಟದ ನಾಯಕರನ್ನು ಕರೆದು ಚರ್ಚಿಸಬೇಕಿದೆ. ಜಿಲ್ಲೆಗೆ ಹೊರಗಿನವರೇ ಉಸ್ತುವಾರಿ ಸಚಿವರಾಗುವುದರಿಂದ ಅಭಿವೃದ್ಧಿ ಕಡೆಗಣನೆ ಮಾಡಲಾಗುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.