ಚಿತ್ರದುರ್ಗ: ಹಚ್ಚ ಹಸಿರಿನಿಂದ ಕೂಡಿದ್ದ ನೂರಾರು ಅಡಕೆ ಗಿಡಗಳಿಗನ್ನು ದುಷ್ಕರ್ಮಿಗಳು ರಾತ್ರೋ ರಾತ್ರಿ ಕೊಡಲಿಯಿಂದ ಕಡಿದು ಹಾಕಿದ್ದಾರೆ. ಚಿತ್ರದುರ್ಗ ತಾಲೂಕಿನ ಕೆನ್ನೇಡ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರೈತ ಗಿರಿಯಪ್ಪ ಎಂಬುವವರು ಸಾಲಸೂಲ ಮಾಡಿ ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೆ ಅಡಕೆ ಸಸಿಗಳನ್ನು ನೆಡಸಿದ್ದರು. ಅಡಕೆ ಗಿಡಗಳು ಸಮೃದ್ದವಾಗಿ ಬೆಳೆಯ ತೊಡಗಿದ್ದವು. ಹೀಗಿರುವಾಗಲೇ ರೈತ ಗಿರಿಯಪ್ಪನ ಏಳಿಗೆಯನ್ನು ಸಹಿಸಲಾಗದ ದುಷ್ಕರ್ಮಿಗಳು 100ಕ್ಕೂ ಹೆಚ್ಚುಅಡಕೆ ಗಿಡಗಳನ್ನು ನೆಲಕ್ಕುರುಳಿಸಿದ್ದಾರೆ ಎನ್ನಲಾಗ್ತಿದೆ.
ರಾತ್ರಿ ಮಳೆ ಬಂದಿದ್ದರಿಂದ ರೈತ ಗಿರಿಯಪ್ಪ ತನ್ನ ಜಮೀನಿಗೆ ಹೋಗಲು ಸಾಧ್ಯವಾಗಿಲ್ಲ. ಈ ಸಮಯವನ್ನೇ ಕಾಯುತ್ತಿದ್ದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಇದರಿಂದ ನೊಂದ ರೈತ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇಂತಹ ಕೃತ್ಯವೆಸಗಿದವರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು. ಗಿರಿಯಪ್ಪನಿಗೆ ಆದ ನಷ್ಟವನ್ನು ಭರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಮಾಜಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ತೋಟ ಮಾಡುವುದು ಎಂದರೆ ಸುಮ್ಮನೆ ಅಲ್ಲ. ತುಂಬಾ ಕಷ್ಟಪಟ್ಟು ಅಡಕೆ ಗಿಡಗನ್ನು ಹಾಕಲಾಗಿದೆ. ನಮ್ಮ ಕೈಲಾದ ಸಹಾಯ ಮಾಡಲಾಗುವುದು ಎಂದು ರೈತನಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: ಪರಿಹಾರದ ಹಣ ನೀಡಲು 5 ಲಕ್ಷ ಲಂಚ: ಎಸಿಬಿ ಬಲೆಗೆ ಬಿದ್ದ ಇಂಜಿನಿಯರ್