ETV Bharat / state

ಸಾಮಾಜಿಕ ಅಂತರ ಮರೆತ ಸಚಿವ ಶ್ರೀ ರಾಮುಲು: ಪದೇ ಪದೆ ನಿಯಮ ಉಲ್ಲಂಘನೆ

author img

By

Published : Jun 22, 2020, 2:44 PM IST

Updated : Jun 22, 2020, 3:25 PM IST

ಪದೇ ಪದೆ ಸಾಮಾಜಿಕ ಅಂತರ ಕಾಪಾಡದೆ, ಜನಸಾಮಾನ್ಯರಿಗೆ ಸಾಮಾಜಿಕ ಅಂತರವನ್ನು ಕಾಪಾಡಿ ಎಂಬ ಪಾಠ ಮಾಡುವ ಸಚಿವರು ತಾವೇ ನಿಯಮ ಪಾಲಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಅಂತರ ಮರೆತ ಸಚಿವ ಶ್ರೀ ರಾಮುಲು
ಸಾಮಾಜಿಕ ಅಂತರ ಮರೆತ ಸಚಿವ ಶ್ರೀ ರಾಮುಲು

ಚಿತ್ರದುರ್ಗ: ಜಿಲ್ಲೆಯ ಪರಶುರಾಂಪುರ ಗ್ರಾಮದಲ್ಲಿ ನಡೆದಿದ್ದ ಅದ್ಧೂರಿ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಲಾಕ್​​​​​​ಡೌನ್​ ನಿಯ‌ಮಾವಳಿಗಳನ್ನು ಗಾಳಿಗೆ ತೂರಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಆರೋಗ್ಯ ಸಚಿವ ಶ್ರೀ ರಾಮುಲು ಮತ್ತೆ ಉದ್ಧಟತನ ಮೆರೆದಿದ್ದಾರೆ.

ಸಾಮಾಜಿಕ ಅಂತರ ಮರೆತ ಸಚಿವ ಶ್ರೀ ರಾಮುಲು

ಸ್ವಕ್ಷೇತ್ರ ಮೊಳಕಾಲ್ಮೂರಿನ ಪ್ರವಾಸದಲ್ಲಿ ಬ್ಯುಸಿಯಾಗಿರುವ ಆರೋಗ್ಯ ಸಚಿವ ಶ್ರೀ ರಾಮುಲು ಮತ್ತೆ ಲಾಕ್​​​​​ಡೌನ್ ನಿಯಮಾವಳಿಗಳನ್ನು ಪಾಲಿಸದೇ ಇರುವುದು ಕಂಡುಬಂದಿದೆ. ಮೊಳಕಾಲ್ಮೂರು ತಾಲೂಕಿನ ಮೇಗಳಹಟ್ಟಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಅವರು ಗುದ್ದಲಿ ಪೂಜೆ ವೇಳೆ ಸಾಮಾಜಿಕ ಅಂತರ ಗಾಳಿಗೆ ತೂರಿದ್ದಾರೆ.

ಓದಿ:ಕೋವಿಡ್ ತುರ್ತು ಸಭೆಗೆ ಸುಧಾಕರ್, ಶ್ರೀರಾಮುಲು ಗೈರು: ಕೊರೊನಾ ನಿಯಂತ್ರಣಕ್ಕಿಂತ ವೈಯಕ್ತಿಕ ಪ್ರತಿಷ್ಠೆ ಮುಖ್ಯವಾಯ್ತಾ ಸಚಿವರಿಗೆ?

ಪದೇ ಪದೆ ಸಾಮಾಜಿಕ ಅಂತರ ಕಾಪಾಡದೆ, ಜನಸಾಮಾನ್ಯರಿಗೆ ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಪಾಠ ಮಾಡುವ ಸಚಿವರು ತಾವೇ ನಿಯಮ ಪಾಲಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸಚಿವರನ್ನು ನೋಡಲು ಕಾರ್ಯಕರ್ತರು ನೂಕುನುಗ್ಗಲು ಉಂಟಾಗಿದ್ದು, ಸಾಮಾಜಿಕ ಅಂತರವೇ ಮಾಯವಾಗಿತ್ತು.

Last Updated : Jun 22, 2020, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.