ETV Bharat / state

ಕೇಂದ್ರ ರಾಜಕಾರಣ ಮಾಡದೆ, ಎಲ್ಲರಿಗೂ ವ್ಯಾಕ್ಸೀನ್‌ ಕೊಡಬೇಕು: ಕೃಷಿ ಸಚಿವ ಬಿ.ಸಿ ಪಾಟೀಲ್ - ಮುರುಘಾ ಮಠ ಕೃಷಿ ಮೇಳ

ವ್ಯಾಕ್ಸೀನ್​ ಸಾರ್ವತ್ರಿಕವಾದದ್ದಾಗಿದೆ. ಕೇಂದ್ರ ಸರ್ಕಾರ ರಾಜಕಾರಣ ಮಾಡದೆ ಎಲ್ಲರಿಗೂ ಕೊರೊನಾ ವ್ಯಾಕ್ಸೀನ್​ ತಲುಪಿಸಬೇಕು..

BC Patil
ಬಿಸಿ ಪಾಟೀಲ್​
author img

By

Published : Oct 24, 2020, 4:37 PM IST

ಚಿತ್ರದುರ್ಗ: ಕೊರೊನಾ ಮಹಾಮಾರಿಗೆ ರಾಮಬಾಣವಾದ ಕೋ ವ್ಯಾಕ್ಸೀನ್​ನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ಎಲ್ಲರಿಗೂ ವ್ಯಾಕ್ಸೀನ್‌ ನೀಡಬೇಕೆಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.

ಕೃಷಿ ಸಚಿವ ಬಿ.ಸಿ ಪಾಟೀಲ್

ಚಿತ್ರದುರ್ಗದ ಮುರುಘಾ ಮಠದಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಭಾಗಿಯಾಗಿ್ದ ವೇಳೆ, ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ಮಾತ್ರ ವ್ಯಾಕ್ಸೀನ್ ನೀಡುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿ, ವ್ಯಾಕ್ಸೀನ್​ ಸಾರ್ವತ್ರಿಕವಾದದ್ದಾಗಿದೆ. ಕೇಂದ್ರ ಸರ್ಕಾರ ರಾಜಕಾರಣ ಮಾಡದೆ ಎಲ್ಲರಿಗೂ ಕೊರೊನಾ ವ್ಯಾಕ್ಸೀನ್​ ತಲುಪಿಸಬೇಕು ಎಂದರು.

ಖರೀದಿ ಕೇಂದ್ರಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭತ್ತದ ಖರೀದಿ ಕೇಂದ್ರ ಡಿ. 1ರಿಂದ ಆರಂಭಿಸಲಾಗುತ್ತದೆ. ಹೆಸರು, ಉದ್ದು ಖರೀದಿ ಕೇಂದ್ರ ಈಗಾಗಲೇ ಆರಂಭಿಸಲಾಗಿದೆ‌ ಎಂದು ಸ್ಪಷ್ಟ ಪಡಿಸಿದರು‌.

ಇನ್ನು ಅತಿವೃಷ್ಟಿಯಾಗಿ ಬೆಳೆಹಾನಿಯಾದ ಬಗ್ಗೆ ಮಾತನಾಡಿ, ಅತಿವೃಷ್ಟಿ ಸರ್ಕಾರ ಮಾಡಿದ್ದಲ್ಲ. ಬದಲಿಗೆ ಪರಿಸರ ಮಾಡಿರುವುದು, ಅತಿವೃಷ್ಟಿ ಆದಾಗ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಅತಿವೃಷ್ಟಿಗಾಗಿ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳ ಬಳಿ 660 ಕೋಟಿ ರೂಪಾಯಿ ಹಣವನ್ನು ಹೆಚ್​ಡಿಆರ್ಎಫ್, ಎನ್​ಡಿಆರ್​ಎಫ್​ನಲ್ಲಿ ಇಡಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.