ETV Bharat / state

ಜನರು ಕಾಂಗ್ರೆಸ್ ಪರವಾಗಿದ್ದರೆ ಯಾಕೆ ಅವರನ್ನ ಮನೆಯಲ್ಲಿ ಕೂರಿಸುತ್ತಿದ್ದರು : ಸಚಿವ B C ಪಾಟೀಲ್​ - ಬಿ.ಸಿ. ಪಾಟೀಲ್ ಹೇಳಿಕೆ

ಕಾಂಗ್ರೆಸ್ ಬಗ್ಗೆ ಜನರಿಗೆ ವಿರೋಧವಿದೆ. ಅವರು ಅದರಿಂದ ಹೊರ ಬರಲು ಸಾಧ್ಯವಿಲ್ಲ. 2023ರ ಚುನಾವಣೆಯಲ್ಲಿಯೂ ಕೂಡ ನಾವೇ ಗೆದ್ದು ಅಧಿಕಾರ ಮಾಡುತ್ತೇವೆ..

ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ
ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ
author img

By

Published : Sep 11, 2021, 8:15 PM IST

Updated : Sep 11, 2021, 9:24 PM IST

ಚಿತ್ರದುರ್ಗ : ಜನರು ಕಾಂಗ್ರೆಸ್ ಪರವಾಗಿದ್ದರೆ ಯಾಕೆ ಅವರನ್ನು ಮನೆಯಲ್ಲಿ ಕೂರಿಸುತ್ತಿದ್ದರು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು. ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಬಳಿ ರೈತರಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಸಚಿವರು ಈ ಕುರಿತು ಮಾತನಾಡಿದರು. ಕಾಂಗ್ರೆಸ್ ಬಗ್ಗೆ ಜನರಿಗೆ ವಿರೋಧವಿದೆ, ಅವರು ಅದರಿಂದ ಹೊರ ಬರಲು ಸಾಧ್ಯವಿಲ್ಲ. 2023ರ ಚುನಾವಣೆಯಲ್ಲಿಯೂ ಕೂಡ ನಾವೇ ಗೆದ್ದು ಅಧಿಕಾರ ಮಾಡುತ್ತೇವೆ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ

ಬಿಜೆಪಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬಿ ಸಿ ಪಾಟೀಲ್ ಮೇಲೇ ಭ್ರಷ್ಟಾಚಾರದ ಆರೋಪ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾಕೆ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಇರಲ್ಲಿಲ್ಲವೇ, ಸಿದ್ದರಾಮಯ್ಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರಲಿಲ್ಲವೇ?‌ಎಂದು ಪ್ರಶ್ನಿಸಿದರು.

ಸಿಲ್ವರ್ ಬ್ರಿಡ್ಜ್​ ಮಾಡುವಾಗ 500 ಕೋಟಿ ಕಿಕ್ ಬ್ಯಾಕ್ ತೆಗೆದುಕೊಂಡಿದ್ದಾರೆ ಎಂಬ ಆರೋಪ‌ ಬಂದಿತ್ತಲ್ಲ. ಆರೋಪ ಮಾಡುವವರು ಇದ್ದೇ ಇರುತ್ತಾರೆ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.

ಯಾವಾಗ ಕೆಲಸ ಮಾಡಲು ಅವರಿಗೆ ಅವಕಾಶ ಸಿಗುವುದಿಲ್ಲ ಆಗ ಅಸಮಾಧಾನದಿಂದ ಈ ರೀತಿ ಆರೋಪ‌ ಮಾಡುತ್ತಾರೆ. ಇದರ ಬಗ್ಗೆ ಯಾವುದೇ ತನಿಖೆ ಆಗಲಿ‌ ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಎಲ್ಲವೂ ಆನ್‌ಲೈನ್ ಟೆಂಡರ್ ಆಗುತ್ತದೆ. ಟೆಂಡರ್‌ದಾರ ಆನ್‌ಲೈನ್‌ನಲ್ಲಿ‌ ಅರ್ಜಿ ಹಾಕಿ ಹಣ ಕಟ್ಟುತ್ತಾನೆ. ಆನ್‌ಲೈನ್‌ನಲ್ಲಿ‌ ಕಂಪನಿಗಳಿಗೆ ಹಣ ಹೋಗುತ್ತದೆ. ಇಲ್ಲಿ ಎಲ್ಲವೂ ಪಾರದರ್ಶಕತೆ ಇರುತ್ತದೆ ಎಂದರು.

ಇನ್ನು, ನಿಫಾ ವೈರಸ್ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೇರಳದಿಂದ ಬರುವವರು ನೆಗೆಟಿವ್ ವರದಿ ಇಲ್ಲದೆ ಯಾರೂ ಬಾರದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಯಾವುದೇ ರೈತ ವಿರೋಧಿ ಕಾಯ್ದೆಗಳು ಇಲ್ಲ. ರೈತರಿಗೆ ಎಂಎಸ್​​ಪಿಯನ್ನು ಕೂಡ ಉತ್ತಮವಾಗಿ ಕೊಡಲಾಗುತ್ತಿದೆ ಎಂದರು.

ರೈತರು ಲಾಭವನ್ನು ಪಡೆಯುತ್ತಿದ್ದಾರೆ. ರೈತರಿಗೆ ಎಲ್ಲಿ ಬೇಕಾದರೂ ಬೆಳೆಯನ್ನು ಮಾರಲು ಅವಕಾಶ ನೀಡಿದ್ದೇವೆ. ಇಂತಹ ಅವಕಾಶ ನೀಡಿದ ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದು ವಿರೋಧ ನೀತಿಯೇ ಎಂದು ಪ್ರಶ್ನಿಸಿದ ಅವರು, ಇದು ರೈತ ವಿರೋಧ ನೀತಿಯಲ್ಲಎಂದರು.

ಇನ್ನು, ಗಣೇಶ ಆಚರಣೆಗೆ ಹಿಂದೂ‌ಮಹಾ ಸಭಾ ಗಣಪತಿಯ ಸಮಿತಿ ಸೆಡ್ಡು ಹೊಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಅದೇನು ದೊಡ್ಡ ವಿಷಯವಲ್ಲ, ನಾವೆಲ್ಲರೂ ಹಿಂದೂಗಳು, ನಾವೆಲ್ಲರೂ ಭಾರತೀಯರು. ಇದರ ಬಗ್ಗೆ ಸಿಎಂ ಮತ್ತು ಸಂಘ ಪರಿವಾದವರು ಕುಳಿತು ಮಾತನಾಡುತ್ತಾರೆ ಎಂದರು.

ಮತ್ತೊಂದು ಕಡೆ ಉಡುಪಿಯಲ್ಲಿ‌ ನಡೆಯುತ್ತಿರುವ ಮತಾಂತರ ಕುರಿತು ಮಾತನಾಡಿದ ಅವರು, ಮತಾಂತರ ಮಾಡುವುದು ಅಕ್ಷಮ್ಯ ಅಪರಾಧ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

Last Updated : Sep 11, 2021, 9:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.