ಚಿತ್ರದುರ್ಗ: ಮಧ್ಯ ಕರ್ನಾಟಕದ 2ನೇ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಗಾಂಜಾ ಗಮ್ಮತ್ತು ಜೋರಾಗಿತ್ತು. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವದ ದಿನ ಹಾಗೂ ಮಾರನೇ ದಿನ ಪ್ರತಿ ವರ್ಷದಂತೆ ಸಾಧುಗಳು ಗಾಂಜಾ ಸೇದುವುದರಲ್ಲಿ ನಿರತರಾಗಿದ್ದರು.
ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ದೊಡ್ಡ ಜಾತ್ರೆ ಇದಾಗಿದ್ದು, ರಾಜ್ಯದ ವಿವಿಧೆಡೆ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಸಾಧುಗಳು ಗಾಂಜಾ ಸೇದುತ್ತಾ ಪೊಲೀಸರ ಭಯವಿಲ್ಲದೇ ಭಜನೆಯಲ್ಲಿ ತೊಡಗಿದ್ದರು. ಈ ವೇಳೆ ಸ್ಥಳೀಯರು ಕೂಡ ನಾಗಾ ಸಾಧುಗಳ ಜೊತೆ ಸೇರಿ ಗಾಂಜಾ ಗಮ್ಮತ್ತು ಅನುಭವಿಸಿದ್ರು.
ಈ ಬಾರಿ ಜಿಲ್ಲಾಡಳಿತದಿಂದ ಗಾಂಜಾ ಸೇವನೆ ಹಾಗೂ ಪ್ರಾಣಿ ಬಲಿಗೆ ಕಟ್ಟುನಿಟ್ಟಿನ ನಿಷೇಧವಿದ್ದರೂ, ಸಾಧುಗಳು ಅದನ್ನೂ ಲೆಕ್ಕಿಸದೆ ಗಾಂಜಾ ಪ್ರಿಯರೊಂದಿಗೆ ಧಮ್ ಎಳೆಯುತ್ತಾ ಅದರ ಅಮಲಿನಲ್ಲೇ ತೇಲಾಡುತ್ತಿದ್ದರು!