ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ 1 ನಗರಸಭೆ ಸೇರಿದಂತೆ 2 ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ.
ಹಿರಿಯೂರು ನಗರಸಭೆ: ದೋಸ್ತಿಗೆ ಜೈ
ಹಿರಿಯೂರು ನಗರಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ದೋಸ್ತಿಗೆ ಮತದಾರ ಜೈ ಎಂದಿದ್ದಾನೆ. ನಗರಸಭೆಯ ಗದ್ದುಗೆ ಕೈ-ದಳ ಮೈತ್ರಿಯ ವಶವಾಗಿದೆ. ಹಿರಿಯೂರು ನಗರಸಭೆಯ ಒಟ್ಟು 31 ಸದಸ್ಯ ಬಲದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ 13+03, ಪಕ್ಷೇತರು-09, ಬಿಜೆಪಿ-06 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಭಾರಿ ಹಿನ್ನೆಡೆಯಾಗಿದೆ.
ಹೊಳಲ್ಕೆರೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಒಲಿದ ವಿಜಯಲಕ್ಷ್ಮಿ: ಪಕ್ಷೇತರ
ಹೊಳಲ್ಕೆರೆ ಪಟ್ಟಣ ಪಂಚಾಯ್ತಿಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. 16 ಸದಸ್ಯ ಬಲವುಳ್ಳ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್-02, ಬಿಜೆಪಿ-06, ಪಕ್ಷೇತರು-08 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಒಂದೇ ಕುಟುಂಬದ ಮೂವರು ಅಭ್ಯರ್ಥಿಗಳಾದ ವಿಜಯಸಿಂಹ, ಜಯಸಿಂಹ, ಮಮತಾ ಜಯಸಿಂಹ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಗಳಿಸಿದ್ದಾರೆ.
ಮೊಳಕಾಲ್ಮೂರು ಪಟ್ಟಣ ಪಂಚಾಯತಿ: ಕಮಲ ಪಾಲು
ಮೊಳಕಾಲ್ಮೂರು ಪಟ್ಟಣ ಪಂಚಾಯ್ತಿಯಲ್ಲಿ 16 ವಾರ್ಡ್ಗಳಿದ್ದು, ಬಿಜೆಪಿ-08 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ , ಕಾಂಗ್ರೆಸ್-06 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇನ್ನು 2 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.