ಚಿತ್ತದುರ್ಗ: ಕೊರೊನಾ ತಡೆಗಾಗಿ ನಿತ್ಯ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಸಾರ್ವಜನಿಕರು ಹೂವಿನ ಸುರಿಮಳೆ ಸುರಿಸುವ ಮೂಲಕ ಗೌರವ ಸೂಚಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಪೊಲೀಸರು ಪರೇಡ್ ನಡೆಸುವ ಮೂಲಕ ಯಾರೂ ಮನೆಯಿಂದ ಹೊರಬಾರದಂತೆ ಜಾಗೃತಿ ಮೂಡಿಸಿದರು. ಈ ವೇಳೆಯಲ್ಲಿ ಜನರು ಪೊಲೀಸರ ಮೇಲೆ ಹೂ ಮಳೆ ಸುರಿಸಿ ಅದ್ಧೂರಿಯಾದ ಸ್ವಾಗತ ಕೋರಿದ್ದಾರೆ.
ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಪಟ್ಟಣದಲ್ಲಿ ರೂಟ್ ಮಾರ್ಚ್ ವೇಳೆ ಈ ಹೂ ಮಳೆ ಸುರಿಸಲಾಗಿದ್ದು, ಪೊಲೀಸರಿಗೆ ಕೊರೊನಾ ವಾರಿಯರ್ಸ್ ಎಂದು ಚಪ್ಪಾಳೆ ತಟ್ಟಿ ಜನರು ಹುರಿದುಂಬಿಸಿದ್ದಾರೆ. ಬಳಿಕ ಎಸ್ಪಿ ಜಿ.ರಾಧಿಕಾರವರು ಬಡವರಿಗೆ ದಿನಸಿ ಕಿಟ್ ವಿತರಿಸಿದರು.