ETV Bharat / state

ಪೋಷಕರ ಬಳಿ ಮಗು ಸೇರಿಸಿ, ಮಾನವೀಯತೆ ಮೆರೆದ ಶಾಸಕಿ ಪೂರ್ಣಿಮಾ - ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನನ್ನು ಪೋಷಕರ ಮಡಿಲಿಗೆ ಸೇರಿಸಿ ಶಾಸಕಿ ಮಾನವೀಯತೆ ಮರೆದಿದ್ದಾರೆ.

Hiriyuru MLA Purnima Srinivas
Hiriyuru MLA Purnima Srinivas
author img

By

Published : Sep 18, 2020, 3:05 AM IST

ಚಿತ್ರದುರ್ಗ: ದಾರಿ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಮಗುವನ್ನು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪೋಷಕರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಾನವೀಯತೆ ಮೆರೆದ ಶಾಸಕಿ ಪೂರ್ಣಿಮಾ

ರಾಷ್ಟ್ರೀಯ ಹೆದ್ದಾರಿ 4ರ ಇಕ್ಕೆಲದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗುವನ್ನು ಗಮನಿಸಿ ಎತ್ತಿಕೊಂಡ ಶಾಸಕಿ, ತದನಂತರ ತಾಯಿಯ ಮಡಲಿಗೆ ಮರಳಿಸಿ, ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ಬಳಿ ನಡೆದಿದೆ.

Hiriyuru MLA Purnima Srinivas
ಮಗು ತಾಯಿ ಮಡಿಲು ಸೇರಿಸಿದ ಶಾಸಕಿ

ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒಂಟಿಯಾಗಿ‌ ನಡೆದುಕೊಂಡು ತೆರಳುತ್ತಿದ್ದ ಮಗುವನ್ನು ಕಂಡು ಮೊದಲು ಮಾತನಾಡಿಸಿದ್ದಾರೆ. ಅ ಪುಟ್ಟ ಮಗುವನ್ನು ನೋಡಿ ವಿಳಾಸ ಹಾಗೂ ಪೋಷಕರ ಬಗ್ಗೆ ಕೇಳಿದ್ದಾರೆ. ಪುಟ್ಟ ಮಗು ಮಾತನಾಡಲು ತಡವಾರಿಸಿದಾಗ ಯಾರ್ದಪ್ಪೋ‌ ಈ ಮಗು ಎಂದು ಕೂಗಿದಾಗ ಅಲ್ಲೇ ದೂರದಲ್ಲಿ ಕೆಲಸ‌‌ ಮಾಡುತ್ತಿದ್ದ ಮಗುವಿನ ಪೋಷಕರು ದೌಡಾಯಿಸಿ ಮಗು ನಮ್ಮದು‌‌ ಎಂದು ಹೇಳಿದ್ದಾರೆ. ಈ ವೇಳೆ ಮಗುವನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಒಪ್ಪಿಸಿ ಮಾನವೀಯತೆ ಮೆರೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.