ಚಿತ್ರದುರ್ಗ : ವಾಣಿ ವಿಲಾಸ ಸಾಗರದಿಂದ ನೀರು ಹರಿಸುವ ವಿಚಾರವಾಗಿ ಸಿಎಂ ಬಿಎಸ್ವೈಗೆ ಪತ್ರ ಬರೆದಿರುವ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನನ್ನ ಮುಂದಿನ ನಿರ್ಣಯ ವ್ಯತಿರಿಕ್ತವಾಗಿದ್ದರೆ ಅದಕ್ಕೆ ನೀವೆ ಕಾರಣ ಎಂದಿದ್ದಾರೆ.
ವಾಣಿ ವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆಯ ವೇದಾವತಿ ನದಿಗೆ ಹೆಚ್ಚುವರಿ ನೀರು ಹರಿಸಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಿಎಂಗೆ ಪತ್ರ ಬರೆದಿದ್ದು, ಚಳ್ಳಕೆರೆ ಕಾಂಗ್ರೆಸ್ ಶಾಸಕ ರಘುಮೂರ್ತಿಯ ಒತ್ತಾಯಕ್ಕೆ ಮಣಿದು ವೇದಾವತಿ ನದಿಗೆ 0.25 ಟಿಎಂಸಿ ನೀರು ಹರಿಸಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದೇವೆ, ನಿರ್ಧಾರ ತೆಗೆದುಕೊಳ್ಳುವಾಗ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ವೇದಾವತಿ ನದಿಗೆ ನೀರು ಹರಿಸಿದಾಗ ರೈತ ಮುಖಂಡರೊಂದಿಗೆ ಖುದ್ದಾಗಿ ಜಲಾಶಯದ ಬಳಿ ತೆರಳಿ ಹರಿಯುವ ನೀರನ್ನು ಬಂದ್ ಮಾಡಿಸಿದ್ದ ಶಾಸಕಿ, ಇದೀಗ ಮತ್ತೆ ನೀರು ಹರಿಸಲು ಮುಂದಾಗಿರುವುದಕ್ಕೆ ಅಸಮಧಾನ ವ್ಯಕ್ತಡಿಸಿದ್ದಾರೆ.