ETV Bharat / state

ಹಿರಿಯೂರು ಕಾಂಗ್ರೆಸ್ ಪಕ್ಷದ ನಗದಸಭೆ ಸದಸ್ಯ ಕೊರೊನಾಗೆ ಬಲಿ - ಚಿತ್ರದುರ್ಗ ಕೊರೊನಾ ಲೆಟೆಸ್ಟ್ ನ್ಯೂಸ್‌

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ದಾದಾಪೀರ್ ಕೊರೊನಾದಿಂದ ಮೃತಪಟ್ಟಿದ್ದಾರೆ.

ನಗದಸಭೆ ಸದಸ್ಯ ದಾದಾಪೀರ್
ನಗದಸಭೆ ಸದಸ್ಯ ದಾದಾಪೀರ್
author img

By

Published : Aug 16, 2020, 3:40 PM IST

ಚಿತ್ರದುರ್ಗ: ಹಿರಿಯೂರು ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ದಾದಾಪೀರ್ ಕೊರೊನಾಗೆ ಬಲಿಯಾಗಿದ್ದಾರೆ.

ಜಿಲ್ಲೆಯ ಹಿರಿಯೂರು ಪಟ್ಟಣದ ನಿವಾಸಿ ಹಾಗೂ 15 ನೇ ವಾರ್ಡಿನ ಸದಸ್ಯರಾಗಿರುವ 40 ವರ್ಷದ ದಾದಾಪೀರ್ ಅವರಿಗೆ ಆಗಸ್ಟ್ .7 ರಂದು ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಇಡೀ ಕುಟುಂಬ ಆಸ್ಪತ್ರೆಗೆ ದಾಖಲಾಗಿತ್ತು.

ಆದರೆ ದಾದಾಪೀರ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಿಂದ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹಿರಿಯೂರಿನ ಬಳಿ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.