ಚಿತ್ರದುರ್ಗ: ಕಳೆದ ದಿನ ರಾತ್ರಿ ಸುರಿದ ಧಾರಾಕಾರ ಮಳೆಗೆ ಹೊಸದುರ್ಗ ತಾಲೂಕಿನ ರೈತರು ಹೈರಾಣಾಗಿದ್ದು, ಮಳೆಯಿಂದಾಗಿ ವೀಳ್ಯದೆಲೆ ಬೆಳೆ ಬೆಳೆಯಲು ಸಹಕಾರಿಯಾಗಿದ್ದ ಮರಗಳು ಸೇರಿದಂತೆ ಬಳ್ಳಿಗಳು ನೆಲಕ್ಕುರುಳಿವೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ನಾಕೀಕೆರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ಮಹಂತೇಶ್ ಎಂಬ ರೈತನಿಗೆ ಸೇರಿದ ವೀಳ್ಯದೆಲೆ ತೋಟದಲ್ಲಿ ಮಳೆ ಈ ರೀತಿಯ ಅವಾಂತರ ಸೃಷ್ಟಿಸಿದೆ.
ಮಳೆಯಿಂದಾಗಿ ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದ ವೀಳ್ಯದೆಲೆ ತೋಟ ನಾಶವಾಗಿದೆ. ಮಳೆಯಿಂದಾಗಿ 2 ಲಕ್ಷದಷ್ಟು ರೈತ ಮಹಂತೇಶ್ ಅವರಿಗೆ ನಷ್ಟವಾಗಿದ್ದು, ಬೆಳೆ ಪರಿಹಾರಕ್ಕಾಗಿ ಜಿಲ್ಲಾಡಳಿತ ಮೊರೆ ಹೋಗಿದ್ದಾನೆ.