ಚಿತ್ರದುರ್ಗ: ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪೆಟ್ರೋಲಿಯಂ ತೈಲ ಮಾರಾಟದಲ್ಲಿ (ಪೆಟ್ರೋಲ್ ಬಂಕ್) ಒಂದಲ್ಲ ಒಂದು ರೀತಿ ಗ್ರಾಹಕರಿಗೆ ಮೋಸ ಎಸಗಲಾಗುತ್ತದೆ. ಆದರೆ ಇದೆಲ್ಲದಕ್ಕೂ ಕಡಿವಾಣ ಹಾಕಲಾಗುತ್ತಿದೆ.
ಇದನ್ನೂ ಓದಿ...ಕಳ್ಳತನ, ದರೋಡೆಗೆ ಬೆಚ್ಚಿದ ಕುಂದಾನಗರಿ: ಅಪರಾಧ ವಿಭಾಗ ಪೊಲೀಸರು ನಿಷ್ಕ್ರೀಯ!
ಜಿಲ್ಲಾದ್ಯಂತ 134 ಪೆಟ್ರೋಲ್ ಹಾಗೂ ಡಿಸೇಲ್ ಬಂಕ್‌ಗಳು ಕಾರ್ಯನಿರ್ವಹಿಸಿ ತೈಲ ಮಾರಾಟ ಮಾಡುತ್ತಿವೆ. ತೈಲ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದರೆ, ಇತ್ತ ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಹೆಚ್ಚಿನ ಬೆಲೆಗೆ ಕಡಿಮೆ ಪ್ರಮಾಣದ ತೈಲ ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ದೂರುಗಳು ಹೊಸದೇನಲ್ಲ. ಆದರೆ ಗ್ರಾಹಕರಿಗೆ ಮೋಸವಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬಂಕ್‌ಗಳ ಮೇಲೆ ನಿಗಾ ವಹಿಸಲು ಹಾಗೂ ಗ್ರಾಹಕರಿಗೆ ನ್ಯಾಯ ಒದಗಿಸಲು ಜಿಲ್ಲೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಎರಡು ಕಚೇರಿಗಳನ್ನು ಸ್ಥಾಪಿಲಾಗಿದೆ. ಕಳೆದ ವರ್ಷ 134 ಪೆಟ್ರೋಲ್/ಡಿಸೇಲ್ ಬಂಕ್‌ಗಳ ಪೈಕಿ 73 ಬಂಕ್‌ಗಳ ಗುಣಮಟ್ಟ ತಪಾಸಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಈ ಪೈಕಿ 38 ಬಂಕ್‌ಗಳಲ್ಲಿ ಕಡಿಮೆ ತೈಲ ನೀಡುತ್ತಿರುವ ಮಾಹಿತಿ ಆಧರಿಸಿ ಬಂಕ್‌ಗಳ ಮಾಲೀಕರಿಗೆ ₹78,500 ದಂಡದ ಬಿಸಿ ಮುಟ್ಟಿಸಲಾಗಿದೆ. ಜಿಲ್ಲೆಯ 3 ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ₹8,000 ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಪೆಟ್ರೋಲ್ ಬಂಕ್‌ಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.