ETV Bharat / state

ಚಿತ್ರದುರ್ಗ: ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ - Gang arrest for theft of government offices

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಕಚೇರಿಗಳು ಸೇರಿದಂತೆ ಅನೇಕ ಕಡೆ ಕಂಪ್ಯೂಟರ್​ಗಳ ಕಳವು ಮಾಡುತ್ತಿದ್ದ ಖತರ್ನಾಕ್ ಖದೀಮರ ಗ್ಯಾಂಗ್ಅನ್ನು ಬಂಧಿಸುವಲ್ಲಿ ಮೊಳಕಾಲ್ಮೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರ ತನಿಖೆ ವೇಳೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

gang-arrest-for-theft-of-government-offices-in-chitradurga
ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ
author img

By

Published : Mar 19, 2022, 5:46 PM IST

ಚಿತ್ರದುರ್ಗ: ಸರ್ಕಾರಿ ಕಚೇರಿಗಳು ಸೇರಿದಂತೆ ಅನೇಕ ಕಡೆ ಕಂಪ್ಯೂಟರ್​ಗಳ ಕಳವು ಮಾಡುತ್ತಿದ್ದ ಖತರ್ನಾಕ್ ಖದೀಮರ ಗ್ಯಾಂಗ್ ನ್ನು ಬಂಧಿಸುವಲ್ಲಿ ಮೊಳಕಾಲ್ಮೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಪಟ್ಟಣದ ಕಟುಕರ ಬೀದಿ ನಿವಾಸಿ ಅಬ್ದುಲ್ ರೆಹಮಾನ್ (33), ಭಾಗ್ಯಜ್ಯೋತಿ ನಗರದ ನಿವಾಸಿಗಳಾದ ವಾಸಿಂ ಅಕ್ರಂ (23), ಮುಬಾರಕ್ (34), ಅಲ್ಲಾಭಕ್ಷ (29) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು. ಕಳೆದ ವರ್ಷದ ಸೆಪ್ಟಂಬರ್​, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹಲವು ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ಸರಣಿ ಕಳ್ಳತನವನ್ನು ಈ ತಂಡವು ನಡೆಸಿತ್ತು. ಪಟ್ಟಣದ ತೋಟಗಾರಿಕೆ ಇಲಾಖೆ, ಬಿಇಒ ಕಚೇರಿ ಮತ್ತು ಪಶುಸಂಗೋಪನಾ ಇಲಾಖೆಯಲ್ಲಿನ ಕಂಪ್ಯೂಟರ್ ಗಳನ್ನು ಈ ಕಳ್ಳರು ಕದ್ದೊಯ್ದಿದ್ದರು.

ಸರ್ಕಾರಿ ಇಲಾಖೆಗಳಲ್ಲಿ ಸಿಸಿಟಿವಿ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಂಡ ಕಳ್ಳರ ತಂಡ ಹಗಲು ಹೊತ್ತಲ್ಲಿ ಇಲಾಖೆಗಳ ಕಡೆ ಗಸ್ತು ನಡೆಸಿ ರಾತ್ರಿಯಾಗುತ್ತಿದ್ದಂತೆ ಸರ್ಕಾರಿ ಇಲಾಖೆಗಳ ಬೀಗ ಒಡೆದು ಕಂಪ್ಯೂಟರ್ ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.

ಅಲ್ಲದೆ ಬಂಧಿತ ಆರೋಪಿಗಳ ತಂಡವು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬಯಲಿಗೆ ಬಂದಿದ್ದು, ಪಟ್ಟಣದ ಮುಬಿನ್ ಎಂಬವರ ಮನೆಯಲ್ಲಿ 10 ಗ್ರಾಂ ಬಂಗಾರ ಹಾಗೂ 15ಸಾವಿರ ನಗದು ಹಣ ಕದ್ದ ಪ್ರಕರಣ, ನುಂಕಪ್ಪನ ಕಟ್ಟೆ ಹತ್ತಿರ ನಿಲ್ಲಿಸಲಾಗಿದ್ದ ಕೆಎಸ್ಆರ್​ಟಿಸಿ ಬಸ್ ನಲ್ಲಿ ಡೀಸೆಲ್ ಕಳ್ಳತನ ಮಾಡಿರುವ ಬಗ್ಗೆ ಈ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರಂಭದಿಂದಲೂ ಕಳ್ಳರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಸಬ್ಇನ್ಸ್ಪೆಕ್ಟರ್ ಎಂ.ಕೆ ಬಸವರಾಜ್ ಮತ್ತು ಪೊಲೀಸ್ ಸಿಬ್ಬಂದಿ ಕೊನೆಗೂ ಖತರ್ನಾಕ್ ಗ್ಯಾಂಗನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಓದಿ : ಮೊದಲ ಕ್ಯಾಬಿನೆಟ್​​ನಲ್ಲೇ ಭಗವಂತ್​​ ಮಾನ್​​​ ಸರ್ಕಾರದ ದಿಟ್ಟ ನಡೆ.. 25 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಅಂಗೀಕಾರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.